ಅಬ್ಬಾ! ಮಹಿಳೆಯರು ಎಷ್ಟೊಂದು ಶಕ್ತಿಶಾಲಿಗಳು, ನಾನೂ ಅವರಂತಾಗುತ್ತೇನೆ: ವೇಟ್​ಲಿಫ್ಟಿಂಗ್ ನೋಡುತ್ತಾ ಪುಟ್ಟ ಬಾಲೆ ಕಂಡ ಕನಸಿದು

Viral Video: ಟೊಕಿಯೊದಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಸ್ಪರ್ಧೆಯ ಮಹಿಳಾ ವೇಟ್​​ಲಿಫ್ಟಿಂಗ್ ಸ್ಪರ್ಧೆಯನ್ನು ನೋಡುತ್ತಾ ಪುಟ್ಟ ಬಾಲೆಯೊಬ್ಬಳು ಮಾತನಾಡಿದ್ದಾಳೆ. ಮಹಿಳಾ ಕ್ರೀಡಾಪಟುವಿನ ಶಕ್ತಿಯನ್ನು ಕೊಂಡಾಡುತ್ತಾ, ತಾನೂ ಅವರಂತೆಯೇ ಆಗುತ್ತೇನೆ ಎಂದು ಕನಸು ಕಾಣುವ ಆಕೆ ಈಗ ನೆಟ್ಟಿಗರ ಮನ ಗೆದ್ದಿದ್ದಾಳೆ.

ಅಬ್ಬಾ! ಮಹಿಳೆಯರು ಎಷ್ಟೊಂದು ಶಕ್ತಿಶಾಲಿಗಳು, ನಾನೂ ಅವರಂತಾಗುತ್ತೇನೆ: ವೇಟ್​ಲಿಫ್ಟಿಂಗ್ ನೋಡುತ್ತಾ ಪುಟ್ಟ ಬಾಲೆ ಕಂಡ ಕನಸಿದು
ವಿಡಿಯೊದಿಂದ ಸೆರೆಹಿಡಿಯಲಾಗಿರುವ ಚಿತ್ರ (ಕೃಪೆ: ಟ್ವಿಟರ್)
Follow us
TV9 Web
| Updated By: shivaprasad.hs

Updated on: Jul 29, 2021 | 3:27 PM

ಟೊಕಿಯೊ ಒಲಂಪಿಕ್ಸ್​ನ ವೇಟ್​ಲಿಫ್ಟಿಂಗ್ ನೋಡುತ್ತಾ ಪುಟ್ಟ ಕಂದಮ್ಮ ಒಬ್ಬಳು ಕಾಮೆಂಟರಿ ನೀಡಿದ್ದು ಈಗ ನೆಟ್ಟಿಗರ ಮನ ಗೆದ್ದಿದೆ. ಅತ್ಯಂತ ಬೆರಗಿನಿಂದ ವೇಟ್​ಲಿಫ್ಟಿಂಗ್​ನಲ್ಲಿ ಅಮೇರಿಕಾದ ಮಹಿಳಾ ಸ್ಪರ್ಧಿಯೋರ್ವರು ಭಾರ ಎತ್ತುವುದನ್ನು ನೋಡುತ್ತಾ ಪುಟ್ಟ ಬಾಲೆ ಹಲವು ಮಾತುಗಳನ್ನು ಮುದ್ದಾಗಿ ಹೇಳಿದ್ದಾಳೆ. ‘ಅಬ್ಬಾ, ಮಹಿಳೆಯರು ಎಷ್ಟೊಂದು ಶಕ್ತಿಶಾಲಿ, ಎಷ್ಟು ತೂಕವನ್ನು ಅವರು ಎತ್ತುತ್ತಾರೆ. ನಾನೂ ದೊಡ್ಡವಳಾದ ಮೇಲೆ ಅವರ ರೀತಿಯೇ ಆಗುತ್ತೇನೆ. ಬಹಳ ಬಲಶಾಲಿಯಾಗುತ್ತೇನೆ’ ಎಂದು ಪುಟ್ಟ ಬಾಲೆ ಕನಸನ್ನು ಕಂಡಿದ್ದಾಳೆ.

ತನ್ನ ತಂದೆಯ ಜೊತೆ ಕುಳಿತುಕೊಂಡು ಟಿವಿಯಲ್ಲಿ ಪಂದ್ಯ ನೋಡುತ್ತಿದ್ದ ಬಾಲೆ, ತಾನು ದೊಡ್ಡವಳಾಗಿ ಬಲಶಾಲಿಯಾದಾಗ ಅಲ್ಲಿ ಹೋಗುತ್ತೇನೆ ಎಂದೂ ಹೇಳುತ್ತಾಳೆ. ಕೊನೆಗೆ ಅವಳ ಇಷ್ಟದ ವೇಟ್​ಲಿಫ್ಟರ್ ಗೆದ್ದ ತಕ್ಷಣ ‘ಅವಳು ಗೆದ್ದಳು, ಅವಳು ಗೆದ್ದಳು!’(She’s the winner! She’s the winner) ಎನ್ನುತ್ತಾ ಕುಣಿದು ಕುಪ್ಪಳಿಸಿದ್ದಾಳೆ. ಮೂಲದಲ್ಲಿ ಟಿಕ್​ಟಾಕ್​ನಲ್ಲಿ ಅಪ್​ಲೋಡ್ ಆಗಿರುವ ಈ ವಿಡಿಯೊ ಎಲ್ಲೆಡೆ ಜನಪ್ರಿಯವಾಗುತ್ತಿದ್ದು, ಈಗ ಟ್ವಿಟರ್​ನಲ್ಲೂ ಹಂಚಿಕೊಳ್ಳಲಾಗಿದೆ. ಕ್ರೀಡೆಗಳನ್ನು ನಿಮ್ಮ ಮಕ್ಕಳೊಂದಿಗೆ ಏಕೆ ನೋಡಬೇಕು ಎಂಬ ಪ್ರಶ್ನೆಯಿದ್ದರೆ ದಯವಿಟ್ಟು ಈ ವಿಡಿಯೊ ನೋಡಿ ಎಂದು ಬರೆದುಕೊಂಡು ಎಲಿಜಬೆತ್ ಓಯ್ಲರ್ ಎಂಬ ಕೋಚ್ ಒಬ್ಬರು ಮೈಕ್ರೊ ಬ್ಲಾಗಿಂಗ್ ತಾಣ ಟ್ವಿಟರ್​ನಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ವಿಡಿಯೊ ಇಲ್ಲಿದೆ:

ವಿಡಿಯೊದ ಕಾಮೆಂಟ್ ಸೆಕ್ಷನ್ ಜನರ ಮೆಚ್ಚುಗೆಯಿಂದ ತುಂಬಿ ಹೋಗಿದ್ದು, ಪುಟ್ಟ ಬಾಲೆಯಿಂದ ಇನ್ನಷ್ಟು ಕಾಮೆಂಟರಿ ನೀಡುವ ವಿಡಿಯೊ ಬಿಡುಗಡೆ ಮಾಡಿ ಎಂದು ಕೋರಿಕೆ ಸಲ್ಲಿಸಿದ್ಧಾರೆ. ಕೆಲವರು ಆಕೆ ವೇಟ್​ಲಿಫ್ಟಿಂಗ್​ಗೆ ಹೀಗೆ ಕಾಮೆಂಟ್ ಕೊಡುವುದಾದರೆ- ಇನ್ನು ಜಿಮ್ನಾಸ್ಟಿಕ್ಸ್ ಅಥವಾ ಓಟದ ಸ್ಪರ್ಧೆಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಭಾರತದ ವೇಟ್​ಲಿಫ್ಟರ್ ಸತೀಶ್ ಶಿವಲಿಂಗಮ್ ಅವರ ಪುತ್ರಿ ಒಲಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಅವರನ್ನು ಅನುಕರಿಸಿ ‘ಜೂನಿಯರ್ ಮೀರಾಬಾಯಿ ಚಾನು’ ಎಂದು ಸುದ್ದಿಯಾಗಿದ್ದರು.

ಇದನ್ನೂ ಓದಿ: Viral Video: ಬಾಟಲಿಯಲ್ಲಿ ಹಾಲು ಕುಡಿಯುತ್ತಾ, ಮಣ್ಣಿನಲ್ಲಿ ಹೊರಳಾಡುತ್ತಿದೆ ಖಡ್ಗಮೃಗ; ಕ್ಯೂಟ್ ವಿಡಿಯೋ ವೈರಲ್

ಇದನ್ನೂ ಓದಿ: Viral Video: ಯಮಹಾ ಬೈಕ್​ ಓಡಿಸಿ ಕ್ಯಾಮರಾಕ್ಕೆ ಪೋಸ್​ ಕೊಟ್ಟ ವೃದ್ದೆ! ಯುವಕರೆಲ್ಲಾ ಬೆರಗಾಗುವ ವಿಡಿಯೋವಿದು​

(Little girl cute reaction while watching the women weightlifting competition of Tokyo Olympics got netizens love)

ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?