Daily Horoscope: ರಾಜಕೀಯ ವ್ಯಕ್ತಿಗಳು ಇಂದು ಒಳ್ಳೆಯ ದಿನ

Updated on: Feb 24, 2025 | 6:43 AM

ಫೆಬ್ರವರಿ 24 ಸೋಮವಾರದ ದಿನಭವಿಷ್ಯವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ವಿವರಿಸಿದ್ದಾರೆ. ರಾಹುಕಾಲ 8:05 ರಿಂದ 9:34 ರವರೆಗೆ ಇದೆ. ಶುಭ ಕಾಲ 9:35 ರಿಂದ 11:04 ರವರೆಗೆ. ಮಹಾಶಿವರಾತ್ರಿ ಹತ್ತಿರ ಇದೆ. ವಿಶ್ವ ಮುದ್ರಣ ದಿನವೂ ಇದಾಗಿದೆ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ ಮತ್ತು ಮೀನ ರಾಶಿಗಳ ಫಲಾಫಲಗಳನ್ನು ವಿವರಿಸಲಾಗಿದೆ. ಪ್ರತಿ ರಾಶಿಗೂ ಶುಭ ಬಣ್ಣ, ದಿಕ್ಕು, ಸಂಖ್ಯೆ ಮತ್ತು ಮಂತ್ರವನ್ನು ತಿಳಿಸಲಾಗಿದೆ. ಉದ್ಯೋಗ, ಆರ್ಥಿಕ, ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ಸಾಮಾನ್ಯ ಮಾಹಿತಿಯನ್ನು ನೀಡಲಾಗಿದೆ. ವಿವರವಾದ ಭವಿಷ್ಯಕ್ಕಾಗಿ, ಈ ವಿಡಿಯೋ ನೋಡಿ.

ಫೆಬ್ರುವರಿ 24 ಸೋಮವಾರದ ದಿನಭವಿಷ್ಯವನ್ನು ಖ್ಯಾತ ಜ್ಯೋತಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.ಈ ದಿನ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಏಕಾದಶಿ, ಪೂರ್ವಾಷಾಢ ನಕ್ಷತ್ರ, ಸಿದ್ಧಿಯೋಗ, ಮತ್ತು ಬಾಲವ ಕರಣಗಳ ಸಂಯೋಗವಿದೆ. ರಾಹುಕಾಲ 8:05 ರಿಂದ 9:34 ರವರೆಗೆ ಇದೆ. ಶುಭಕಾಲ ಅಥವಾ ಸರ್ವಸಿದ್ಧಿ ಕಾಲ 9:35 ರಿಂದ 11:04 ರವರೆಗೆ ಇರುತ್ತದೆ. ಮಹಾಶಿವರಾತ್ರಿಯು ಕೇವಲ ಎರಡು ದಿನಗಳಲ್ಲಿ ಆಚರಿಸಲ್ಪಡಲಿದೆ. ಓಂ ನಮಃ ಶಿವಾಯ ಜಪ ಮಾಡಲು ಇದು ಶುಭ ದಿನವಾಗಿದೆ. ಇಂದು ಸರ್ವತ್ರ ವಿಜಯ ಏಕಾದಶಿ ಕೂಡ ಇದೆ.ತಲಕಾಡು ಬಾಲಕೃಷ್ಣನ ಆರಾಧನೆ ಮಹೋತ್ಸವ ನಡೆಯುತ್ತದೆ. ವಿಶ್ವ ಮುದ್ರಣ ದಿನವನ್ನು ಆಚರಿಸಲಾಗುತ್ತಿದೆ.ರವಿ ಕುಂಭ ರಾಶಿಯಲ್ಲೂ, ಚಂದ್ರ ಧನುಸ್ಸು ರಾಶಿಯಲ್ಲೂ ಸಂಚಾರ ಮಾಡುತ್ತಿದ್ದಾರೆ.