ಉಡುಪಿ: ತುಳುನಾಡಿನಲ್ಲೇ ದೈವಾರಾಧನೆಗೆ ಅಪಮಾನ
ಉಡುಪಿ ನಗರದ ನೆಲ್ಲಿಕಟ್ಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ಕೊರಗಜ್ಜ, ಬಬ್ಬು ಸ್ವಾಮಿ ಮತ್ತು ತನ್ನಿಮಾನಿಗ ದೈವಗಳ ವೇಷಗಳನ್ನು ಧರಿಸಿರುವುದು ದೈವಾರಾಧನೆಗೆ ಅಪಮಾನ ಎಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇದು ತುಳುನಾಡಿನಲ್ಲಿ ದೈವಾರಾಧನೆಯನ್ನು ಅಪಮಾನಿಸುವ ಘಟನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಉಡುಪಿಯಲ್ಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ.
ಉಡುಪಿ, ಫೆಬ್ರವರಿ 23: ತುಳುನಾಡಿನಲ್ಲೇ ದೈವಾರಾಧನೆಗೆ (Daivaradhane) ಅಪಮಾನ ನಡೆದಿರುವಂತಹ ಘಟನೆ ನಗರದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ. ನೆಲ್ಲಿಕಟ್ಟೆಯಲ್ಲಿ ಮೆರವಣಿಗೆಯೊಂದರಲ್ಲಿ ಕೊರಗಜ್ಜ, ಬಬ್ಬು ಸ್ವಾಮಿ, ತನ್ನಿಮಾನಿಗ ದೈವದ ವೇಷ ತೊಟ್ಟು ಭಾಗಿಯಾಗಿದ್ದಾರೆ. ಇಷ್ಟುದಿನ ಹೊರ ಜಿಲ್ಲೆಯಲ್ಲಿ ದೈವಾರಾಧನೆಗೆ ಅಪಮಾನ ಎಂದು ಹೋರಾಟ ಮಾಡಲಾಗುತ್ತಿತ್ತು. ಇದೀಗ ಉಡುಪಿಯಲ್ಲೇ ಈ ರೀತಿ ದೈವಕ್ಕೆ ಅಪಮಾನ ಹಿನ್ನೆಲೆ ಚರ್ಚೆ ಶುರುವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದೈವದ ವೇಷ ತೊಟ್ಟವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.