Video: ಬಾಲಿಯಲ್ಲಿ 65 ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಸಾವು, 43 ಮಂದಿ ನಾಪತ್ತೆ

Updated on: Jul 03, 2025 | 9:42 AM

ಅರವತ್ತೈದು ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಸಾವನ್ನಪ್ಪಿದ್ದು, 43 ಮಂದಿ ನಾಪ್ತತೆಯಾಗಿರುವ ಘಟನೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದೆ. ಬುಧವಾರ ತಡರಾತ್ರಿ ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಹೊರಟ ಕೆಎಂಪಿ ಟುನು ಪ್ರತಮಾ ಜಯ ಸುಮಾರು ಅರ್ಧ ಗಂಟೆಯ ನಂತರ ಮುಳುಗಿದೆ. ಅದು ಬಾಲಿಯ ಗಿಲಿಮನುಕ್ ಬಂದರಿಗೆ 50 ಕಿ.ಮೀ ಪ್ರಯಾಣ ನಡೆಸುತ್ತಿತ್ತು ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಬಾಲಿ, ಜುಲೈ 03: ಅರವತ್ತೈದು ಜನರನ್ನು ಹೊತ್ತೊಯ್ಯುತ್ತಿದ್ದ ಹಡಗು ಮುಳುಗಿ ಇಬ್ಬರು ಸಾವನ್ನಪ್ಪಿದ್ದು, 43 ಮಂದಿ ನಾಪ್ತತೆಯಾಗಿರುವ ಘಟನೆ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದಿದೆ. ಬುಧವಾರ ತಡರಾತ್ರಿ ಪೂರ್ವ ಜಾವಾದ ಕೇತಪಾಂಗ್ ಬಂದರಿನಿಂದ ಹೊರಟ ಕೆಎಂಪಿ ಟುನು ಪ್ರತಮಾ ಜಯ ಸುಮಾರು ಅರ್ಧ ಗಂಟೆಯ ನಂತರ ಮುಳುಗಿದೆ. ಅದು ಬಾಲಿಯ ಗಿಲಿಮನುಕ್ ಬಂದರಿಗೆ 50 ಕಿ.ಮೀ ಪ್ರಯಾಣ ನಡೆಸುತ್ತಿತ್ತು ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಹಡಗಿನಲ್ಲಿ 53 ಪ್ರಯಾಣಿಕರು, 12 ಸಿಬ್ಬಂದಿ ಮತ್ತು 14 ಟ್ರಕ್‌ಗಳು ಸೇರಿದಂತೆ 22 ವಾಹನಗಳಿದ್ದವು. ಎರಡು ಶವಗಳನ್ನು ಹೊರತೆಗೆಯಲಾಗಿದೆ ಮತ್ತು 20 ಜನರನ್ನು ರಕ್ಷಿಸಲಾಗಿದೆ ಎಂದು ಬನ್ಯುವಾಂಗಿ ಪೊಲೀಸ್ ಮುಖ್ಯಸ್ಥ ರಾಮ ಸಮತಮ ಪುತ್ರ ಹೇಳಿದ್ದಾರೆ. ಅಲ್ಲಿ ಹಡಗುಗಳನ್ನು ಸಾರಿಗೆಗಾಗಿ ಬಳಸಲಾಗುತ್ತದೆ. ಅಲ್ಲಿ ಹಡಗುಗಳ ಅಪಘಾತವು ಸಾಮಾನ್ಯವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ