AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಂತರ ರೂಪಾಯಿ ಚಿನ್ನದ ಒಡೆಯ ಸುರೇಶ್; ಆದ್ರೆ ಒಂದು ತುತ್ತು ಊಟಕ್ಕೆ ಜಗಳ

ಕೋಟ್ಯಂತರ ರೂಪಾಯಿ ಚಿನ್ನದ ಒಡೆಯ ಸುರೇಶ್; ಆದ್ರೆ ಒಂದು ತುತ್ತು ಊಟಕ್ಕೆ ಜಗಳ

ಮದನ್​ ಕುಮಾರ್​
|

Updated on: Nov 11, 2024 | 3:36 PM

Share

ಗೋಲ್ಡ್ ಸುರೇಶ್ ಅವರ ಬಳಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಚಿನ್ನ ಇದೆ. ಆದರೆ ಈಗ ಅವರಿಗೆ ಒಂದು ತುತ್ತು ಅನ್ನಕ್ಕಾಗಿ ಜಗಳ ಮಾಡುವ ಪರಿಸ್ಥಿತಿ ಬಂದಿದೆ. ಹೌದು, ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಸ್ಪರ್ಧಿ ಆಗಿರುವ ಅವರು ಐಶ್ವರ್ಯಾ ಸಿಂಧೋಗಿ ಜೊತೆ ಜಗಳ ಮಾಡಿದ್ದಾರೆ. ಊಟದ ವಿಚಾರಕ್ಕೆ ಕಿರಿಕ್ ಆಗಿದೆ. ಆ ಪ್ರೋಮೋ ಇಲ್ಲಿದೆ..

ಹೊರ ಜಗತ್ತಿನಲ್ಲಿ ಎಷ್ಟೇ ಶ್ರೀಮಂತರಾದರೂ ಬಿಗ್ ಬಾಸ್ ಮನೆಯ ಒಳಗೆ ಬಂದಾಗ ಕಷ್ಟದ ಜೀವನವನ್ನು ಅನುಭವಿಸಲೇಬೇಕು. ಕಡಿಮೆ ಸಾಮಾಗ್ರಿಗಳಲ್ಲಿ ಅಡುಗೆ ಮಾಡಬೇಕು. ಎಲ್ಲವನ್ನೂ ಹಂಚಿಕೊಂಡು ತಿನ್ನಬೇಕು. ಈ ಪರಿಸ್ಥಿತಿಯಲ್ಲಿ ಜಗಳ ಆಗುವುದು ಸಹಜ. ಬಿಗ್ ಬಾಸ್ ಮನೆಯಲ್ಲಿ ಒಂದು ತುತ್ತು ಅನ್ನಕ್ಕಾಗಿ ಗೋಲ್ಡ್ ಸುರೇಶ್ ಹಾಗೂ ಐಶ್ವರ್ಯಾ ಸಿಂಧೋಗಿ ನಡುವೆ ಜಗಳ ಆಗಿದೆ. ಈ ಸಂಚಿಕೆ ನವೆಂಬರ್​ 11ರಂದು ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More