ಬಂದೂಕು ಇಟ್ಟುಕೊಂಡಿದ್ದೇನೆ ಎಂದು ಬೆದರಿಸಲು ಯತ್ನಿಸಿದ: ನಿರ್ಮಾಪಕ ಸತೀಶ್ ವಿರುದ್ಧ ಆರೋಪ
ಗೋವಾಕ್ಕೆ ಪ್ರವಾಸ ಹೋಗಿದ್ದಾಗ ನಿರ್ಮಾಪಕರ ನಡುವೆ ನಡೆದ ಗಲಾಟೆ ಬಗ್ಗೆ ವಿವರ ನೀಡಲು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ಸತೀಶ್ ವಿರುದ್ಧ ಬೆದರಿಕೆ ಆರೋಪ ಮಾಡಿದ್ದಾರೆ.
ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ನಿರ್ಮಾಪಕರು ಕೆಲವರ ನಡುವೆ ಗಲಾಟೆ ನಡೆದಿದ್ದು, ನಿರ್ಮಾಪಕ ‘ರಥಾವರ ಮಂಜು’ ಹಾಗೂ ಗಣೇಶ್ ಅವರಿಗೆ ತೀವ್ರ ಪೆಟ್ಟಾಗಿದೆ. ನಿರ್ಮಾಪಕ ಸತೀಶ್ (Producer Sathish) ಎಂಬಾತ ಕುಡಿದ ಮತ್ತಿನಲ್ಲಿ ಈ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಗಲಾಟೆ ಸಂಬಂಧ ಮಾಹಿತಿ ನೀಡಲು ಇಂದು (ಮೇ 30) ಸುದ್ದಿಗೋಷ್ಠಿ ಕರೆದಿದ್ದ ಫಿಲಂ ಚೇಂಬರ್ ಅಧ್ಯಕ್ಷ ಎನ್ಎಂ ಸುರೇಶ್, ‘ಸತೀಶ್ ರೌದ್ರಾವತಾರ ತೋರಿಸಿದ ರೌಡಿತನ ಮೆರೆದ, ಆತ ಮೊದಲೂ ಸಹ ಏರು ದನಿಯಲ್ಲಿ ಮಾತನಾಡಿ ಶಿಸ್ತು ಉಲ್ಲಂಘಿಸಿದ್ದ, ಈಗ ದೊಡ್ಡದಾಗಿ ಜಗಳ ಮಾಡಿ ಹಲ್ಲೆ ಮಾಡಿದ. ಎಲ್ಲ ನಡೆದು ಗೋವಾದಲ್ಲಿ ಆತನನ್ನು ಮನೆಗೆ ಕಳಿಸುವ ಯತ್ನದಲ್ಲಿರುವಾಗ ನನ್ನ ಬಳಿ ಬಂದೂಕಿಗೆ ತೋರಿಸಲಾ ಎಂದು ನನಗೇ ಬೆದರಿಕೆ ಹಾಕಲು ಯತ್ನಿಸಿದ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ