‘ಫೈಟ್ ಬಿಡಿಸೋಕೆ ಹೋಗಿ ಕಣ್ಣಿಗೆ ಚುಚ್ಚಿಸಿಕೊಂಡೆ’; ನಿರ್ಮಾಪಕ ಸತೀಶ್ ವಿರುದ್ಧ ಗಣೇಶ್ ಆಕ್ರೋಶ
ಗೋವಾದಲ್ಲಿ ಪಾರ್ಟಿ ಮಾಡುವಾಗ ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರ ನಡುವೆ ಜಗಳ ಆಗಿದೆ. ಎ. ಗಣೇಶ್ ಮೇಲೆ ಆಂತರ್ಯ ಸತೀಶ್ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗಣೇಶ್ ಅವರು ಮಾತನಾಡಿದ್ದಾರೆ. ‘ಗಲಾಟೆ ಆಗುತ್ತದೆ ಎನ್ನುವ ಯಾವುದೇ ಸೂಚನೆ ಇರಲಿಲ್ಲ. ಆದಿನ ಅವನು ಫುಲ್ ಟೈಟ್ ಆಗಿದ್ದ ಅನಿಸುತ್ತದೆ’ ಎಂದಿದ್ದಾರೆ ಗಣೇಶ್.
ಗೋವಾದಲ್ಲಿ ಪಾರ್ಟಿ ಮಾಡುವಾಗ ಕನ್ನಡ ಚಿತ್ರರಂಗದ ಕೆಲವು ನಿರ್ಮಾಪಕರ ನಡುವೆ ಜಗಳ ಆಗಿದೆ. ಎ. ಗಣೇಶ್ ಮೇಲೆ ಆಂತರ್ಯ ಸತೀಶ್ (Satish) ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗಣೇಶ್ ಅವರು ಮಾತನಾಡಿದ್ದಾರೆ. ‘ಊಟದ ಹಾಲ್ ಕೆಲವೇ ನಿಮಿಷಗಳಲ್ಲಿ ರಕ್ತ ಆಗೋಯ್ತು. ಫೈಟ್ ಆಗುತ್ತದೆ ಎಂದು ಮೊದಲೇ ಊಹಿಸಿಕೊಂಡು ಹೋಗಿದ್ದರೆ ಸಿದ್ಧತೆ ಮಾಡಿಕೊಳ್ಳಬಹುದು. ಆದರೆ, ಇದು ಏಕಾಏಕಿ ನಡೆದ ಘಟನೆ. ನಾನು ಫೈಟ್ ತಪ್ಪಿಸೋಕೆ ಹೋದವನು. ಅವರ ಬಳಿ ಪೋರ್ಕ್ ಸ್ಪೂನ್ ಇದೆ ಎಂದು ನಾನು ಗಮನಿಸಿಲ್ಲ. ಬಿಡು ಬಿಡು ಎಂದು ಹೋಗುತ್ತಿದ್ದಂತೆ ಚುಚ್ಚಿಯೇ ಬಿಟ್ಟ’ ಎಂದು ಅವರು ಹೇಳಿದ್ದಾರೆ. ‘ಗಲಾಟೆ ಆಗುತ್ತದೆ ಎನ್ನುವ ಯಾವುದೇ ಸೂಚನೆ ಇರಲಿಲ್ಲ. ಆದಿನ ಅವನು ಫುಲ್ ಟೈಟ್ ಆಗಿದ್ದ ಅನಿಸುತ್ತದೆ’ ಎಂದಿದ್ದಾರೆ ಗಣೇಶ್. ಅವರ ಕಣ್ಣಿಗೆ ಹಾನಿ ಆಗಿದ್ದು, ಬ್ಯಾಂಡೇಜ್ ಹಾಕಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
