ಗೋವಾನಲ್ಲಿ ನಿರ್ಮಾಪಕರ ಗಲಾಟೆ, ಘಟನೆ ವಿವರಿಸಿದ ಗಾಯಾಳು ಗಣೇಶ್

ಗೋವಾನಲ್ಲಿ ನಿರ್ಮಾಪಕರ ಗಲಾಟೆ, ಘಟನೆ ವಿವರಿಸಿದ ಗಾಯಾಳು ಗಣೇಶ್

ಮಂಜುನಾಥ ಸಿ.
|

Updated on: May 29, 2024 | 4:54 PM

ಕನ್ನಡ ಸಿನಿಮಾ ನಿರ್ಮಾಪಕರು ಕೆಲವರು ಗೋವಾಕ್ಕೆ ಮೋಜಿಗಾಗಿ ತೆರಳಿದ್ದರು. ಈ ವೇಳೆ ಕೆಲ ನಿರ್ಮಾಪಕರ ನಡುವೆ ಗಲಾಟೆ ನಡೆದಿದ್ದು, ಗಣೇಶ್ ಹಾಗೂ ರಥಾವರ ಮಂಜು ಮೇಲೆ ಹಲ್ಲೆ ಮಾಡಲಾಗಿದ್ದು, ಅವರಿಗೆ ಗಾಯಗಳಾಗಿವೆ. ಘಟನೆ ಬಗ್ಗೆ ಗಣೇಶ್ ವಿವರಿಸಿದ್ದಾರೆ.

ಕನ್ನಡ ಸಿನಿಮಾ ನಿರ್ಮಾಪಕರು (Producer) ಕೆಲವರು ಕೆಲವು ದಿನಗಳ ಹಿಂದೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕೆಲವು ನಿರ್ಮಾಪಕರು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆ. ನಿರ್ಮಾಪಕ ಗಣೇಶ್ ಹಾಗೂ ರಥಾವರ ಮಂಜು ಮೇಲೆ ನಿರ್ಮಾಪಕ ಸತೀಶ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದಾಗಿ ಗಣೇಶ್ ಅವರ ಕಣ್ಣೀಗೆ ಹಾನಿ ಆಗಿದೆ. ಗಲಾಟೆ ಬಳಿಕ ಬೆಂಗಳೂರಿಗೆ ವಾಪಸ್ಸಾಗಿರುವ ಗಣೇಶ್ ಟಿವಿ9 ಜೊತೆ ಮಾತನಾಡಿದ್ದು, ಗೋವಾದಲ್ಲಿ ನಡೆದ ಘಟನೆ ವಿವರಿಸಿದ್ದಾರೆ. ನಿರ್ಮಾಪಕ ಸತೀಶ್ ವಿರುದ್ಧ ಆರೋಪ ಮಾಡಿದ ಗಣೇಶ್, ‘ಸತೀಶ್ ಸ್ಪೂನ್ ತೆಗೆದುಕೊಂಡು ನಮಗೆ ಚುಚ್ಚಿದ, ರಥಾವರ ಮಂಜುಗೆ ಸಹ ಹೊಡೆದಿದ್ದಾನೆ. ನನಗೆ ತೀವ್ರ ಪೆಟ್ಟಾಗಿದೆ ಕಣ್ಣೇ ಹೋಗುತ್ತಿತ್ತು. 15 ಹೊಲಿಗೆಗಳನ್ನು ಹಾಕಲಾಗಿದೆ. ಮಂಜುಗೆ ಜೋರಾಗಿ ಪೆಟ್ಟಾಗಿದ್ದು, ಆತನ ಹಣೆಗೆ ತೀವ್ರ ಗಾಯವಾಗಿದೆ. ನಮ್ಮ ಮೇಲೆ ಹಲ್ಲೆ ಮಾಡಿದ ಬಳಿಕ ಡ್ಯಾನ್ಸ್ ಮಾಡುತ್ತಾ ಅಟ್ಟಹಾಸ ಮೆರೆದ’ ಎಂದು ಗಣೇಶ್ ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ