Final Journey: ತನಗೆ ಆಗುತ್ತಿಲ್ಲವೆಂದು ಹೆಲ್ಪರ್ ಕೈಗೆ ಬಸ್ ಸ್ಟೇರಿಂಗ್ ಕೊಟ್ಟ ವ್ಯಕ್ತಿ, ಗಂಟೆ ಬಳಿಕ ಸಾವು

Updated on: Aug 29, 2025 | 3:17 PM

ಸತೀಶ್​ ರಾವ್​ ಎಂಬುವವರು ಇಂದೋರ್​​ನಿಂದ ಜೋಧ್​ಪುರಕ್ಕೆ ಬಸ್​​ ಚಲಾಯಿಸುತ್ತಿದ್ದರು. ಮಾರ್ಗಮಧ್ಯೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕೂಡಲೇ ಬಸ್ ಸ್ಟೇರಿಂಗ್​​​ ಅನ್ನು ಹೆಲ್ಪರ್​ ಕೈಗೆ ಕೊಟ್ಟಿದ್ದರು. ಏನೋ ಆರೋಗ್ಯ ಸಮಸ್ಯೆ ಇರಬಹುದು. ಮಲಗಿದರೆ ಕಡಿಮೆಯಾಗುತ್ತದೆ ಎಂದು ಮತ್ತೋರ್ವ ಚಾಲಕ ತಿಳಿದಿದ್ದರು. ಆದರೆ ಸತೀಶ್​ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ಮತ್ತು ಆಸ್ಪತ್ರೆ ತಲುಪುವ ಮೊದಲೇ ಅವರು ಹೋಗುತ್ತಿದ್ದ ಬಸ್ಸಿನಲ್ಲೇ ಪ್ರಜ್ಞೆ ತಪ್ಪಿದ್ದರು,

ಇಂದೋರ್​, ಆಗಸ್ಟ್ 29: ಸತೀಶ್​ ರಾವ್​ ಎಂಬುವವರು ಇಂದೋರ್​​ನಿಂದ ಜೋಧ್​ಪುರಕ್ಕೆ ಬಸ್​​ ಚಲಾಯಿಸುತ್ತಿದ್ದರು. ಮಾರ್ಗಮಧ್ಯೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕೂಡಲೇ ಬಸ್ ಸ್ಟೇರಿಂಗ್​​​ ಅನ್ನು ಹೆಲ್ಪರ್​ ಕೈಗೆ ಕೊಟ್ಟಿದ್ದರು. ಏನೋ ಆರೋಗ್ಯ ಸಮಸ್ಯೆ ಇರಬಹುದು. ಮಲಗಿದರೆ ಕಡಿಮೆಯಾಗುತ್ತದೆ ಎಂದು ಮತ್ತೋರ್ವ ಚಾಲಕ ತಿಳಿದಿದ್ದರು.

ಆದರೆ ಸತೀಶ್​ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು ಮತ್ತು ಆಸ್ಪತ್ರೆ ತಲುಪುವ ಮೊದಲೇ ಅವರು ಹೋಗುತ್ತಿದ್ದ ಬಸ್ಸಿನಲ್ಲೇ ಪ್ರಜ್ಞೆ ತಪ್ಪಿದ್ದರು, ಕೊನೆಗೆ ಮೇಲೇಳಲೇ ಇಲ್ಲ.ರಾಜಸ್ಥಾನದ ಪಾಲಿ ಸಮೀಪ ಈ ಘಟನೆ ನಡೆದಿದ್ದು, ಕ್ಯಾಮೆರಾದಲ್ಲಿ ಘಟನೆ ದಾಖಲಾಗಿದೆ.

ಇಬ್ಬರು ಚಾಲಕರು ಸಹಾಯ ಪಡೆದು ಬೇಗ ಆಸ್ಪತ್ರೆಗೆ ತಲುಪುವ ಭರವಸೆಯಲ್ಲಿದ್ದರು.ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವಂತೆ, ಚಾಲಕನ ಪಕ್ಕದಲ್ಲಿ ಕಾಲು ಚಾಚಿ ಕುಳಿತಿದ್ದ ರಾವ್ ಚಾಲಕನ ಮೇಲೆ ಪ್ರಜ್ಞೆ ತಪ್ಪಿ ಬಿದ್ದರು. ಪಕ್ಕದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಮೂಕ ಪ್ರೇಕ್ಷಕರಾಗಿ ಕುಳಿತಿದ್ದರು.

ಕೆಲವೇ ಸೆಕೆಂಡುಗಳಲ್ಲಿ, ಪ್ರಯಾಣಿಕರು ಬಂದು ರಾವ್ ಅವರನ್ನು ಎತ್ತಿಕೊಂಡು ಹೋದರು. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು.ವೈದ್ಯರ ಪ್ರಕಾರ ರಾವ್ ಅವರಿಗೆ ಹೃದಯಾಘಾತವಾಗಿದೆ.ದುರಂತದ ಬಗ್ಗೆ ತಿಳಿದ ನಂತರ, ಕುಟುಂಬವು ಮರಣೋತ್ತರ ಪರೀಕ್ಷೆ ಸೇರಿದಂತೆ ಯಾವುದೇ ರೀತಿಯ ವಿಚಾರಣೆಗೆ ನಿರಾಕರಿಸಿತು.

ಅವರ ಆರೋಗ್ಯ ಪರಿಸ್ಥಿತಿಯನ್ನು ಅರಿತು ಗಂಟೆಗಳ ಮೊದಲೇ ರಾವ್ ಬಸ್ಸನ್ನು ಸಹ ಚಾಲಕನಿಗೆ ಓಡಿಸಲು ಹೇಳಿದ್ದ ಪರಿಣಾಮ ಹಲವು ಜನರ ಪ್ರಾಣ ಉಳಿದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Aug 29, 2025 03:16 PM