ಉಡುಪಿ ಬಳಿ ಗಂಗೊಳ್ಳಿ ಬಂದರಿನಲ್ಲಿ ಬೆಂಕಿ ದುರಂತ; ಲಂಗರು ಹಾಕಿದ್ದ 7 ಬೋಟ್ಗಳು ಸುಟ್ಟು ಭಸ್ಮ
ಸ್ಳಳೀಯರೊಬ್ಬರು ಹೇಳುವ ಪ್ರಕಾರ ಒಂದು ಬೋಟ್, ಅದರಲ್ಲಿನ ಬಲೆ ಹಾಗೂ ಇತರ ಸಲಕರಣೆಗಳ ಒಟ್ಟು ಬೆಲೆ ಕನಿಷ್ಟ ರೂ. 70 ಲಕ್ಷಗಳಷ್ಟಾಗುತ್ತದೆ. ಏಳು ಬೋಟ್ ಗಳು ಸುಟ್ಟು ಹೋಗಿದ್ದರೆ, ಏನಿಲ್ಲವೆಂದರೂ 5 ಕೋಟಿ ರೂ. ಗಳ ಹಾನಿಯುಂಟಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೋಟು ಕಳೆದುಕೊಂಡಿರುವ ಮೀನುಗಾರರಿಗೆ ನೆರವಾಗುತ್ತಾರೆಯೇ?
ಉಡುಪಿ: ಇವತ್ತು ಬೆಳಗಿನ ಜಾವ ಬೆಂಗಳೂರು ನಗರದ ಬಾಣಸವಾಡಿಯಲ್ಲಿ ಬೆಂಕಿ ದುರಂತ (fire mishap) ಸಂಭವಿಸಿದ್ದರೆ, ಇಂದೇ ಬೆಳಗ್ಗೆ ಸುಮಾರು 9 ಗಂಟೆಗೆ ಉಡುಪಿ ಜಿಲ್ಲೆಯ ಗಂಗೊಳ್ಳಿ ಬಂದರಿನಲ್ಲಿಯೂ ಅಗ್ನಿ ಅವಗಢ ಜರುಗಿ 7-8 ಮೀನು ಹಿಡಿಯಲು ಉಪಯೋಗಿಸುವ ಬೋಟ್ಗಳು (fishing boats) ಬೆಂಕಿಗಾಹುತಿಯಾಗಿವೆ. ತೀರದಲ್ಲಿ ಲಂಗರು ಹಾಕಿದ್ದ ಬೋಟೊಂದಕ್ಕೆ (anchored boat) ಬೆಂಕಿ ತಗುಲಿ ಜೋರಾಗಿ ಗಾಳಿ ಬೀಸುತ್ತಿದ್ದ ಕಾರಣ ಬೆಂಕಿ ಪಕ್ಕದಲ್ಲಿದ್ದ ಬೋಟ್ ಗಳಿಗೂ ವ್ಯಾಪಿಸಿ 7 ನಾವೆಗಳು ಸುಟ್ಟು ಭಸ್ಮವಾಗಿವೆ ಎಂದು ಟಿವಿ9 ಉಡುಪಿ ವರದಿಗಾರ ಮತ್ತು ಸ್ಥಳೀಯರು ಸಹ ಹೇಳುತ್ತಾರೆ. ಅಗ್ನಿ ಶಾಮಕ ದಳದವರು ಕೂಡಲೇ ಸ್ಥಳಕ್ಕೆ ಧಾವಿಸಿದರೂ, ಅಷ್ಟರಲ್ಲಾಗಲೇ ಬೋಟುಗಳು ಉರಿದು ಭಸ್ಮಗೊಂಡಿದ್ದವಂತೆ. ಸ್ಳಳೀಯರೊಬ್ಬರು ಹೇಳುವ ಪ್ರಕಾರ ಒಂದು ಬೋಟ್, ಅದರಲ್ಲಿನ ಬಲೆ ಹಾಗೂ ಇತರ ಸಲಕರಣೆಗಳ ಒಟ್ಟು ಬೆಲೆ ಕನಿಷ್ಟ ರೂ. 70 ಲಕ್ಷಗಳಷ್ಟಾಗುತ್ತದೆ. ಏಳು ಬೋಟ್ ಗಳು ಸುಟ್ಟು ಹೋಗಿದ್ದರೆ, ಏನಿಲ್ಲವೆಂದರೂ 5 ಕೋಟಿ ರೂ. ಗಳ ಹಾನಿಯುಂಟಾಗಿದೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೋಟು ಕಳೆದುಕೊಂಡಿರುವ ಮೀನುಗಾರರಿಗೆ ನೆರವಾಗುತ್ತಾರೆಯೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ