Karnataka Assembly Polls Results: ಸದನದಲ್ಲಿ ಈ ಬಾರಿ 5 ತಂದೆ-ಮಕ್ಕಳ ಜೋಡಿ ಕಾಣಿಸಲಿವೆ!

Karnataka Assembly Polls Results: ಸದನದಲ್ಲಿ ಈ ಬಾರಿ 5 ತಂದೆ-ಮಕ್ಕಳ ಜೋಡಿ ಕಾಣಿಸಲಿವೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 13, 2023 | 7:51 PM

ಪಟ್ಟಿಯಲ್ಲಿರುವ ಕೊನೆಯ ತಂದೆ-ಮಗನ ಜೋಡಿಯೆಂದರೆ ಅರಕಲಗೂಡು ಕ್ಷೇತ್ರದಿಂದ ಗೆದ್ದಿರುವ ಜೆಡಿಎಸ್ ಅಭ್ಯರ್ಥಿ ಎ ಮಂಜು ಮತ್ತು ಮಡಿಕೇರಿ ಕ್ಷೇತ್ರದಿಂದ ಆದರೆ ಕಾಂಗ್ರೆಸ್ ಟಿಕೆಟ್ ನಿಂದ ಗೆದ್ದಿರುವ ಅವರ ಮಗ ಮಂಥನ್ ಗೌಡ.

ಬೆಂಗಳೂರು: ಸದನದಲ್ಲಿ ತಂದೆ-ಮಕ್ಕಳ ಜೋಡಿ ನೋಡಲು ಇಷ್ಟಪಡುತ್ತೀರಾ? ಓಕೆ, ಈ ಸಲ ಒಟ್ಟು 5 ಅಂಥ ಜೋಡಿಗಳನ್ನು ನೀವು ನೋಡಬಹುದು. ಜೆಡಿಎಸ್ ಅಭ್ಯರ್ಥಿಗಳಾಗಿರುವ ಜಿಟಿ ದೇವೇಗೌಡ (GT Devegowda) ಮತ್ತು ಅವರ ಮಗ ಜಿಡಿ ಹರೀಶ್ ಗೌಡ ಕ್ರಮವಾಗಿ ಚಾಮುಂಡೇಶ್ವರಿ ಮತ್ತು ಹುಣಸೂರು ಕ್ಷೇತ್ರಗಳಿಂದ ವಿಧಾನಸಭೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ರಾಮಲಿಂಗಾರೆಡ್ಡಿ (Ramalinga Reddy) ಬಿಟಿಎಮ್ ಲೇಔಟ್ ಮತ್ತು ಅವರ ಮಗಳು ಸೌಮ್ಯರೆಡ್ಡಿ ಅವರ ಜಯನಗರ ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನ ಕೆ ಹೆಚ್ ಮನಿಯಪ್ಪ (KH Muniyappa) ಮತ್ತು ಅವರ ಮಗಳು ರೂಪಕಲಾ ಶಶಿಧರ್ ಕ್ರಮವಾಗಿ ದೇವನಹಳ್ಳಿ ಹಾಗೂ ಕೆಜಿಎಫ್ ಕ್ಷೇತ್ರಗಳಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಆಗಿರುವ ಎಂ ಕೃಷ್ಣಪ್ಪ ಮತ್ತು ಅವರ ಮಗ ಪ್ರಿಯಾಕೃಷ್ಣ ವಿಜಯನಗರ ಮತ್ತು ಗೋವಿಂದರಾಜ ನಗರ ಕ್ಷೇತ್ರಗಳಿಂದ ಗೆದ್ದಿದ್ದು ಸದನ ಪ್ರವೇಶಿಸಲಿದ್ದಾರೆ. ಈ ಪಟ್ಟಿಯಲ್ಲಿರುವ ಕೊನೆಯ ತಂದೆ-ಮಗನ ಜೋಡಿಯೆಂದರೆ ಅರಕಲಗೂಡು ಕ್ಷೇತ್ರದಿಂದ ಗೆದ್ದಿರುವ ಜೆಡಿಎಸ್ ಅಭ್ಯರ್ಥಿ ಎ ಮಂಜು ಮತ್ತು ಮಡಿಕೇರಿ ಕ್ಷೇತ್ರದಿಂದ ಆದರೆ ಕಾಂಗ್ರೆಸ್ ಟಿಕೆಟ್ ನಿಂದ ಗೆದ್ದಿರುವ ಅವರ ಮಗ ಮಂಥನ್ ಗೌಡ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ