Hassan News: ಜಿಲ್ಲೆಯ 5 ತಾಲ್ಲೂಕುಗಳಲ್ಲಿ ನಿಲ್ಲದ ಮಳೆ ಆರ್ಭಟ; ಇಂದು ಸಹ ರಜೆ ಘೋಷಿಸಿದ ತಾಲ್ಲೂಕು ಆಡಳಿತಗಳು

|

Updated on: Jul 25, 2023 | 10:28 AM

ಜಿಲ್ಲೆಯ ಸಕಲೇಶಪುರ, ಬೇಲೂರು, ಹಾಸನ, ಅರಕಲಗೂಡು ಮತ್ತು ಆಲೂರು ತಾಲ್ಲೂಕುಗಳಲ್ಲಿ ಭಯಂಕರವಾಗಿ ಮಳೆ ಸುರಿಯುತ್ತಿದೆ

ಹಾಸನ:  ಈ ಸಲದ ಮಾನ್ಸೂನ್ ಋತುವನ್ನು (Monsoon Season) ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಮೊದಲ ಒಂದು ತಿಂಗಳು ಕರ್ನಾಟಕದ ಹಲವಾರು ಭಾಗಗಳಲ್ಲಿ ಮಳೆಯಾಗಲಿಲ್ಲ ಮತ್ತು ಅನಾವೃಷ್ಟಿ ಹಿನ್ನೆಲೆಯಲ್ಲಿ ಬರಗಾಲ ಘೋಷಿಸಬೇಕೆಂದು ರೈತ ಸಮುದಾಯ (farming community) ಸರ್ಕಾರವನ್ನು ಆಗ್ರಹಿಸಿತ್ತು. ಆದರೆ ಜುಲೈ ತಿಂಗಳ ದ್ವಿತೀಯಾರ್ಧದಿಂದ (second half) ರಾಜ್ಯದೆಲ್ಲೆಡೆ ಯಾವ ಪರಿ ಮಳೆ ಸುರಿಯುತ್ತಿದೆ ಎಂದರೆ, ರೈತಾಪಿ ಜನ ಈ ಅತಿವೃಷ್ಟಿ ಬೇಸಾಯಕ್ಕೆ ಅನುಕೂಲಕರವಾಗಲ್ಲ ಅನ್ನುತ್ತಿದ್ದಾರೆ. ಹಾಸನ ಜಿಲ್ಲೆಯ ಸ್ಥಿತಿ ನೋಡಿ ಹೇಗಿದೆ ಅಂತ. ಒಂದು ವಾರದಿಂದ ಸುರಿಯುತ್ತಿರುವ ಮಳೆ ನಿಲ್ಲುವ ಸೂಚನೆ ನೀಡುತ್ತಿಲ್ಲ. ಜಿಲ್ಲೆಯ ಸಕಲೇಶಪುರ, ಬೇಲೂರು, ಹಾಸನ, ಅರಕಲಗೂಡು ಮತ್ತು ಆಲೂರು ತಾಲ್ಲೂಕುಗಳಲ್ಲಿ ಭಯಂಕರವಾಗಿ ಮಳೆ ಸುರಿಯುತ್ತಿದೆ. ಈ ಎಲ್ಲ 5 ತಾಲ್ಲೂಕುಗಳ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ