Budget 2023: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಬಜೆಟ್ 2023 ಮಂಡಿಸುವಾಗ ಉಟ್ಟಿದ್ದು ಕರ್ನಾಟಕದ ಸೀರೆ!

ಅರುಣ್​ ಕುಮಾರ್​ ಬೆಳ್ಳಿ

Updated on: Feb 01, 2023 | 3:01 PM

ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರು ಧಾರವಾಡದ ಆರತಿ ಕ್ರಾಫ್ಟ್ ನಲ್ಲಿ ಸೀರೆಯನ್ನು ಖರೀದಿಸಿ ನಿರ್ಮಲಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ

ಧಾರವಾಡ:  ಸಂಸತ್ತಿನಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಂಡಿಸಿದ ಬಜೆಟ್ 2023 ಕರ್ನಾಟಕದ ಜೊತೆ ಹಲವಾರು ವಿಧಗಳಲ್ಲಿ ಕನೆಕ್ಟ್ ಆಗುತ್ತದೆ. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರೋರು ಅಂತ ಕನ್ನಡಿಗರಿಗೆ ಗೊತ್ತಿದೆ. ಬಜೆಟ್ ನಲ್ಲಿ ಕರ್ನಾಟಕದ ಕೆಲ ಯೋಜನೆಗಳಿಗೆ ಅನುದಾನ ಮೀಸಲಿಟ್ಟಿರುವುದು ಸಹ ಗೊತ್ತಾಗಿದೆ. ಅಂದಾಹಾಗೆ, ನಿರ್ಮಲಾ ಸೀತಾರಾಮನ್ ಅವರು ಇಂದು ಉಟ್ಟಿದ್ದ ಸೀರೆ ಸಹ ಕರ್ನಾಟಕದ್ದು ಅಂತ ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಸೀರೆಗಳಿಗೆ ಪ್ರಖ್ಯಾತವಾಗಿರುವ ಇಳಕಲ್ ನಲ್ಲಿ (Ilkal) ಕೈಮಗ್ಗ ನೇಯ್ಗೆ ಮತ್ತು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಕಸೂತಿ ಕೆಲಸ ಮಾಡಿಸಿದ ರೇಷ್ಮೆ ಸೀರೆ ಅದು. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರು (Pralhad Joshi) ಧಾರವಾಡದ ಆರತಿ ಕ್ರಾಫ್ಟ್ ನಲ್ಲಿ ಸೀರೆಯನ್ನು ಖರೀದಿಸಿ ನಿರ್ಮಲಾ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬೋಟಿಕ್ ಮಾಲೀಕರು ಹೇಳುವಂತೆ ಖುದ್ದು ನಿರ್ಮಲಾ ಅವರೇ ಸೀರೆ ಬಣ್ಣವನ್ನು ಆಯ್ಕೆ ಮಾಡಿದ್ದರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 01, 2023 02:24 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.