Tumakuru: ಮೂಢನಂಬಿಕೆಗೊಳಗಾಗಿ ಡಿವೋರ್ಸ್ ಗೆ ಮುಂದಾಗಿದ್ದ ದಂಪತಿಯನ್ನು ಒಂದುಗೂಡಿಸಿದ ಚಿಕ್ಕನಾಯಕನಹಳ್ಳಿ ಕೋರ್ಟ್!
ನ್ಯಾಯಾಲಯದಲ್ಲೇ ದಂಪತಿ ಮತ್ತೊಮ್ಮೆ ಹಾರ ವಿನಿಮಯ ಮಾಡಿಕೊಂಡರು ಮತ್ತು ನ್ಯಾಯಾಧೀಶರು ಹಾಗೂ ವಕೀಲರು ಅವರಿಗೆ ಸಿಹಿ ತಿನ್ನಿಸಿದರು.
ತುಮಕೂರು: ಇದೊಂದು ಅಪರೂಪದ ಮತ್ತು ಮನಸ್ಸಿಗೆ ಮುದ ನೀಡುವ ಸನ್ನಿವೇಶ. ಸುಮಾರು 6 ವರ್ಷಗಳ ಹಿಂದೆ ಪಾರ್ವತಿಯನ್ನು (Parvathamma) ಮದುವೆಯಾಗಿದ್ದ ಮಂಜುನಾಥ (Manjunath) ಅದ್ಯಾವುದೋ ಮೂಢನಂಬಿಕೆಗೆ ಒಳಗಾಗಿ ಆಕೆಯನ್ನು ತ್ಯಜಿಸಲು ನಿರ್ಧರಿಸಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಸಿವಿಲ್ ಕೋರ್ಟ್ ನಲ್ಲಿ ಡಿವೋರ್ಸ್ ಗಾಗಿ ಅರ್ಜಿಯನ್ನೂ ಸಲ್ಲಿಸಿದ್ದ. ಆದರೆ ಸಿವಿಲ್ ಕೋರ್ಟ್ ನ್ಯಾಯಾಧೀಶರಾಗಿರುವ ವೆಂಕಟೇಶಪ್ಪನವರು (Venkateshappa), ಮಂಜುನಾಥನಿಗೆ ಬುದ್ಧಿವಾದ ಹೇಳಿ ಅವನ ಮನ ಪರಿವರ್ತನೆ ಮಾಡಿದ್ದಾರೆ. ಅವರ ಮಾತಿಗೆ ಮನ್ನಣೆ ನೀಡಿದ ಮಂಜುನಾಥ ಪುನಃ ಪಾರ್ವತಮ್ಮ ಜೊತೆ ಸಂಸಾರ ನಡೆಸುವ ಮತ್ತು ಮುಂದ್ಯಾವತ್ತೂ ಮೂಢನಂಬಿಕೆಗಳಿಗೆ ಒಳಗಾಗುವುದಿಲ್ಲ ಅಂತ ಪ್ರಮಾಣ ಮಾಡಿದ. ನ್ಯಾಯಾಲಯದಲ್ಲೇ ದಂಪತಿ ಮತ್ತೊಮ್ಮೆ ಹಾರ ವಿನಿಮಯ ಮಾಡಿಕೊಂಡರು ಮತ್ತು ನ್ಯಾಯಾಧೀಶರು ಹಾಗೂ ವಕೀಲರು ಅವರಿಗೆ ಸಿಹಿ ತಿನ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

