ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಕೊಳೆತ ತರಕಾರಿ, ಕಲಬೆರಕೆ ಟೀ ಪುಡಿ ಪತ್ತೆ

Edited By:

Updated on: Oct 28, 2026 | 3:01 PM

ಬಳ್ಳಾರಿ ನಗರದ 19 ಹೋಟೆಲ್ ಹಾಗೂ ಬೇಕರಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಉಪ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಕೊಳೆತ ತರಕಾರಿ ಹಾಗೂ ಬಣ್ಣ ಮಿಶ್ರಿತ ಟೀ ಪುಡಿ ಪತ್ತೆಯಾಗಿದೆ. ಹೋಟೆಲ್ ರೇಣುಕಾ ದರ್ಶಿನಿ ಮತ್ತು ರೇಣುಕಾ ಬೇಕರಿಗೆ ತಲಾ 25,000 ರೂಪಾಯಿ ದಂಡ ವಿಧಿಸಲಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಈ ತಪಾಸಣೆ ಮುಂದುವರೆಯಲಿದೆ.

ಬಳ್ಳಾರಿ, ಅಕ್ಟೋಬರ್ 28: ಆಹಾರ ಸುರಕ್ಷತೆ ಮತ್ತು ಉಪ ಆಯುಕ್ತರ ತಂಡವು ಬಳ್ಳಾರಿ ನಗರದಲ್ಲಿ ಬುಧವಾರ ಹೋಟೆಲ್‌ಗಳು ಮತ್ತು ಬೇಕರಿಗಳ ಮೇಲೆ ಆಕಸ್ಮಿಕ ದಾಳಿಗಳನ್ನು ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ನಗರದ ಒಟ್ಟು 19 ಹೋಟೆಲ್‌ಗಳು ಮತ್ತು ಬೇಕರಿಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಹಲವು ಅಕ್ರಮಗಳು ಬೆಳಕಿಗೆ ಬಂದಿವೆ. ದಾಳಿ ವೇಳೆ, ವಿವಿಧ ಸ್ಥಳಗಳಲ್ಲಿ ಕೊಳೆತ ತರಕಾರಿಗಳು ಮತ್ತು ಬಣ್ಣ ಮಿಶ್ರಿತ ಟೀ ಪುಡಿ ಪತ್ತೆಯಾಗಿವೆ. ಇಂತಹ ಅಸಮರ್ಪಕ ಮತ್ತು ಅಸುರಕ್ಷಿತ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹೋಟೆಲ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಿರ್ದಿಷ್ಟವಾಗಿ, ಹೋಟೆಲ್ ರೇಣುಕಾ ದರ್ಶಿನಿ ಮತ್ತು ರೇಣುಕಾ ಬೇಕರಿಗಳಲ್ಲಿ ನಿಯಮ ಉಲ್ಲಂಘನೆ ಕಂಡುಬಂದಿದ್ದು, ಅಧಿಕಾರಿಗಳು ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಉಪ ಆಯುಕ್ತರ ನೇತೃತ್ವದಲ್ಲಿ ಈ ದಾಳಿಗಳು ಇನ್ನೂ ಕೆಲವು ದಿನ ಮುಂದುವರೆಯುವ ನಿರೀಕ್ಷೆಯಿದೆ. ಗ್ರಾಹಕರಿಗೆ ಶುಚಿತ್ವ ಮತ್ತು ಗುಣಮಟ್ಟದ ಆಹಾರ ಪದಾರ್ಥಗಳು ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವುದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ವಿನಾಯಕ ಬಡಿಗೇರ್​