ಕಾಲುಕೆರೆದು ಜಗಳಕ್ಕೆ ಹೋಗುವ ಪ್ರವೃತ್ತಿ ಪ್ರದರ್ಶಿಸಿದ ಸಚಿವ ಜಮೀರ್ ಅಹ್ಮದ್

|

Updated on: Oct 08, 2024 | 3:45 PM

ಸಚಿವ ಜಮೀರ್ ಅಹ್ಮದ್ ಉದ್ದೇಶ ಸ್ಪಷ್ಟವಾಗಿತ್ತು. ತಾನು ಆಡುವ ಮಾತಿನಲ್ಲಿ ಶಾಸಕ ಬಸನಗೌಡ ಯತ್ನಾಳ್ ಹೆಸರನ್ನು ಎಳೆತರೋದು ಅವರಿಗೆ ಬೇಕಾಗಿತ್ತು. ಹಿಂದೆ ಯತ್ನಾಳ್ ಆಡಿದ ಮಾತಿಗೆ ಜಮೀರ್ ಉತ್ತರವೂ ಕೊಟ್ಟಾಗಿತ್ತು. ಈಗ ಅದರ ಅವಶ್ಯಕತೆ ಇರಲಿಲ್ಲ.

ವಿಜಯಪುರ: ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅಸಂಬದ್ಧವಾಗಿ ಅಪ್ರಸ್ತುತ ವಿಷಯದ ಬಗ್ಗೆ ಮಾತಾಡಿದರು. ಪತ್ರಕರ್ತರು ವಕ್ಫ್ ಬೋರ್ಡ್ ಆಸ್ತಿಯ ಬಗ್ಗೆ ಪ್ರಶ್ನೆ ಕೇಳದಿದ್ದರೂ ಜಮೀರ್, ಹಿಂದೆ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಡಿದ ಮಾತನ್ನು ಉಲ್ಲೇಖಿಸಿ ವಕ್ಫ್ ಬೋರ್ಡ್ ಆಸ್ತಿ ಸಾರ್ವಜನಿಕರಿಗೆ ಹಂಚಲು ಅದು ತಮ್ಮಪ್ಪನ ಆಸ್ತಿ ಅಲ್ಲ, ಯತ್ನಾಳ್ ಅಪ್ಪನ ಆಸ್ತಿಯೂ ಅಲ್ಲ ಎಂದರು!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್ ಅಹ್ಮದ್ ಖಾನ್