ನೀರಿಗಾಗಿ ಅಲೆದು ನಿತ್ರಾಣಗೊಂಡ ಮರಿ ಆನೆ: ನೀರು ಕುಡಿಸಿ ಉಪಚರಿಸಿದ ಅರಣ್ಯ ಸಿಬ್ಬಂದಿ
ನೀರಿಗಾಗಿ ಅಲೆದು ಮರಿ ಆನೆಯೊಂದು ನಿತ್ರಾಣಗೊಂಡಿರುವಂತಹ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೊರವಲಯದಲ್ಲಿ ಕಂಡುಬಂದಿದೆ. ನೀರು ಅರೆಸಿ ಊರಿನ ಕಡೆ ಬರುವಾಗ ನಿತ್ರಾಣಗೊಂಡು ಆನೆ ಮರಿ ಬಿದ್ದಿದೆ. ನಿತ್ರಾಣಗೊಂಡ ಆನೆ ಮರಿಯನ್ನು ಗಮನಿಸಿದ ಅರಣ್ಯ ಸಿಬ್ಬಂದಿಗಳು ನೀರು ಕುಡಿಸಿ ಉಪಚರಿಸಿದ್ದಾರೆ.
ರಾಮನಗರ, ಏಪ್ರಿಲ್ 05: ರಾಜ್ಯದಲ್ಲಿ ಬರ ಮತ್ತು ಬಿರು ಬಿಸಿಲು ಒಟ್ಟೊಟ್ಟಿಗೆ ಎದುರಾಗಿದ್ದು, ಜನರಿಗೆ ಸಾಕು ಸಾಕಾಗಿ ಹೋಗಿದೆ. ಮನುಷ್ಯರ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಪ್ರಾಣಿ ಸಂಕುಲ ಹೇಳ ತೀರದು. ಬಿರು ಬಿಸಿಲಿಗೆ ಕಾಡಿನೊಳಗಿನ ಕೆರೆ, ಕಟ್ಟೆಗಳು ಬತ್ತಿ ಹೋಗಿವೆ. ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳಿಗೂ ನೀರಿಗೆ ಹಾಹಾಕಾರ ಶುರುವಾಗಿದೆ. ಹೀಗಾಗಿ ನೀರಿಗಾಗಿ ಅಲೆದು ಮರಿ ಆನೆ (elephant) ಯೊಂದು ನಿತ್ರಾಣಗೊಂಡಿರುವಂತಹ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಹೊರವಲಯದಲ್ಲಿ ಕಂಡುಬಂದಿದೆ. ನೀರು ಅರೆಸಿ ಊರಿನ ಕಡೆ ಬರುವಾಗ ನಿತ್ರಾಣಗೊಂಡು ಆನೆ ಮರಿ ಬಿದ್ದಿದೆ. ನಿತ್ರಾಣಗೊಂಡ ಆನೆ ಮರಿಯನ್ನು ಗಮನಿಸಿದ ಅರಣ್ಯ ಸಿಬ್ಬಂದಿಗಳು ನೀರು ಕುಡಿಸಿ ಉಪಚರಿಸಿದ್ದಾರೆ. ನೀರು ಕುಡಿದ ಬಳಿಕ ನಿಧಾನವಾಗಿ ಕಾಡೆನೆಡೆ ಮರಿ ಆನೆ ತೆರಳಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.