PM Narendra Modi: ಪ್ರಧಾನಿ ಮೋದಿ ಮನ್​ ಕಿ ಬಾತ್ ಸಮಾಜದ ಮೇಲೆ ಬೀರಿದ ಪ್ರಭಾವ ಕುರಿತ ಪುಸ್ತಕ ಹೊರಬರಲಿದೆ

|

Updated on: Apr 25, 2023 | 7:30 PM

ಮನ್​ ಕಿ ಬಾತ್ ಕಾರ್ಯಕ್ರಮವು ಸಮಾಜದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎಂದು ವಿಶ್ಲೇಷಿಸಿರುವ ಪ್ರಸಾರ್ ಭಾರತಿ ಮಾಜಿ ಸಿಇಒ ಶಶಿ ಶೇಖರ್ ಬರೆದಿರುವ ‘ಕಲೆಕ್ಟೀವ್ ಸ್ಪಿರಿಟ್, ಕಾಂಕ್ರೀಟ್ ಆಕ್ಷನ್’ಎಂಬ ಪುಸ್ತಕ

ಪ್ರಧಾನಿ ನರೇಂದ್ರ ಮೋದಿಯವರು ನಡೆಸಿಕೊಡುವ ಮನ್​ ಕಿ ಬಾತ್​ ಕಾರ್ಯಕ್ರಮವು 99ನೇ ಸಂಚಿಕೆಯನ್ನು ಮುಗಿಸಿದ್ದು, ಇದೀಗ 100ನೇ ಸಂಚಿಕೆಗೆ ಸಿದ್ಧತೆ ನಡೆಸಿದೆ. ಈ ಹೊತ್ತಿನಲ್ಲಿ ಈ ಮನ್​ ಕಿ ಬಾತ್ ಕಾರ್ಯಕ್ರಮವು ಸಮಾಜದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಿದೆ ಎಂದು ವಿಶ್ಲೇಷಿಸಿರುವ ಪ್ರಸಾರ್ ಭಾರತಿ ಮಾಜಿ ಸಿಇಒ ಶಶಿ ಶೇಖರ್ ಬರೆದಿರುವ ‘ಕಲೆಕ್ಟೀವ್ ಸ್ಪಿರಿಟ್, ಕಾಂಕ್ರೀಟ್ ಆಕ್ಷನ್’ಎಂಬ ಪುಸ್ತಕವನ್ನು ಹೊರತರುತ್ತಿದ್ದಾರೆ. ಸರ್ವೆ ವರದಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರ ಶಕ್ತಿಯುತ ಮತ್ತು ನಿರ್ಣಾಯಕ ನಾಯಕತ್ವ, ಕೇಳುಗರೊಂದಿಗೆ ಭಾವನಾತ್ಮಕ ಸಂಪರ್ಕ, ಕೇಳುಗರಿಂದ ಜನಪ್ರಿಯತೆಗೆ ಕಾರಣವೆಂದು ಉಲ್ಲೇಖಿಸಲಾಗಿದೆ. ಅಲ್ಲದೇ ಮನ್ ಕಿ ಬಾತ್ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ, 60% ಜನರು ರಾಷ್ಟ್ರ ನಿರ್ಮಾಣದಲ್ಲಿ ಆಸಕ್ತಿ ಹೊಂದಿದ್ದಾರೆ, 73% ಜನರು ದೇಶವು ಸರಿಯಾದ ದಿಕ್ಕಿನಲ್ಲಿ ಹೋಗುತ್ತಿರುವುದಾಗಿ ಅಭಿಪ್ರಾಯಪಟ್ಟಿದ್ದಾಗಿ ವರದಿ ಹೇಳಿದೆ.

Published On - 7:30 pm, Tue, 25 April 23

Follow us on