Karnataka Budget Session: ಸದನದಲ್ಲಿಂದು ಬಸವರಾಜ ಬೊಮ್ಮಾಯಿಯವರು ಬಸನಗೌಡ ಯತ್ಳಾಳ್ ಪರ ಫೀಸು ಪಡೆಯದೆ ವಕಾಲತ್ ಮಾಡಿದರು!

|

Updated on: Feb 19, 2024 | 2:54 PM

ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಎಲ್ಲ ಕ್ಷೇತ್ರಗಳಿಗೆ ಅನುದಾನ ನೀಡುತ್ತಿದೆ ಆದರೆ, ವಿರೋಧ ಪಕ್ಷದಲ್ಲಿದ್ದಾಗ ನಮಗೇನೂ ಸಿಗುತ್ತಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿ ಕುಳಿತ ಬಳಿಕ ಮಾತಾಡಲು ನಿಂತ ಬೊಮ್ಮಾಯಿ, ವಿಜಯಪುರದ ಆನುದಾನದ ವಿಷಯದಲ್ಲಿ ಸಚಿವ ಬಿಜೆಡ್ ಜಮೀರ್ ಆಹ್ಮದ್ ಖಾನ್ ಅವರೊಂದಿಗೆ ವಾಗ್ವಾದಕ್ಕಿಳಿದಾಗ ಯತ್ನಾಳ್ ಸಹ ಮಾತಾಡಬಯಸುತ್ತಾರೆ.

ಬೆಂಗಳೂರು: ವಿಧಾನ ಮಂಡಲದ ಬಜೆಟ್ ಅಧಿವೇಶನದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  (Basangouda Patil Yatnal) ಪರ ಫೀಸು-ರಹಿತ ವಕಾಲತ್ ಮಾಡಿದರು! ಇದನ್ನು ನಾವ್ಯಾರೂ ಹೇಳುತ್ತಿಲ್ಲ, ಖುದ್ದು ಬೊಮ್ಮಾಯಿ ಅವರೇ ಹೇಳುತ್ತಾರೆ. ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಎಲ್ಲ ಕ್ಷೇತ್ರಗಳಿಗೆ ಅನುದಾನ ನೀಡುತ್ತಿದೆ ಆದರೆ, ವಿರೋಧ ಪಕ್ಷದಲ್ಲಿದ್ದಾಗ ನಮಗೇನೂ ಸಿಗುತ್ತಿರಲಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿ ಕುಳಿತ ಬಳಿಕ ಮಾತಾಡಲು ನಿಂತ ಬೊಮ್ಮಾಯಿ, ವಿಜಯಪುರದ ಆನುದಾನದ ವಿಷಯದಲ್ಲಿ ಸಚಿವ ಬಿಜೆಡ್ ಜಮೀರ್ ಆಹ್ಮದ್ ಖಾನ್ ಅವರೊಂದಿಗೆ ವಾಗ್ವಾದಕ್ಕಿಳಿದಾಗ ಯತ್ನಾಳ್ ಸಹ ಮಾತಾಡಬಯಸುತ್ತಾರೆ. ಒಂದ್ನಿಮಿಷ ಇರಿ, ಒಂದ್ನಿಮಿಷ ಅಂತ ಬೊಮ್ಮಾಯಿ ಹೇಳಿದಾಗಲೂ ಯತ್ನಾಳ್ ಮಾತಾಡಲು ಪ್ರಯತ್ನಿಸುತ್ತಾರೆ. ಆಗಲೇ ಬೊಮ್ಮಾಯಿ,  ಅರೇ ಸರ್ ನಿಮ್ಮ ಪರವಾಗೇ ನಾನು ಮಾತಾಡ್ತಾ ಇದ್ದೀನಿ, ನಾನು ನಿಮ್ಮ ಬಿನ್ ಫೀಸ್ ವಕೀಲ! ಅನ್ನುತ್ತಾರೆ. ನಂತರ ಅವರು ಜಮೀರ್ ಕಡೆ ತಿರುಗಿ ಮಾತು ಮುಂದುವರಿಸುತ್ತಾ, ವಿಜಯಪುರಕ್ಕೆ ಅನುದಾನ ಇಲ್ಲ ಅಂತೀರಿ, ಆ ಕ್ಷೇತ್ರದಲ್ಲಿ ಒಂದು ಲಕ್ಷ 20 ಸಾವಿರ ಅಲ್ಪಸಂಖ್ಯಾತ ಮತದಾರರಿದ್ದಾರೆ, ಅವರ ಅಭಿವೃದ್ಧಿ ನಿಮಗೆ ಬೇಕಿಲ್ಲವೇ ಎಂದು ಕೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 19, 2024 02:15 PM