Prajadhvani Yatre: ಶಹಾಪುರ ಕಾಂಗ್ರೆಸ್ ಸಮಾವೇಶದಲ್ಲಿ ಮೊಬೈಲ್ ಫೋನ್ ಕಳೆದುಕೊಂಡ ಎಮ್ ಬಿ ಪಾಟೀಲ್
ಕಾರ್ಯಕತರೊಬ್ಬರು ವೇದಿಕೆಯ ಮೇಲೆ ನಿಂತು ಯಾರಿಗಾದರೂ ಫೋನ್ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ, ಅದರಲ್ಲಿ ಅತ್ಯಂತ ಮಹತ್ವದ ದಾಖಲೆಗಳಿವೆ ಅಂತ ಮೈಕ್ ಮೂಲಕ ವಿನಂತಿಸಿಕೊಂಡರು. ಆದರೆ ಫೋನ್ ವಾಪಸ್ಸು ಬರಲಿಲ್ಲ.
ಯಾದಗಿರಿ: ಮಾಜಿ ಗೃಹ ಸಚಿವ ಎಮ್ ಬಿ ಪಾಟೀಲ್ (MB Patil) ಫೋನ್ ಕಳೆದುಕೊಂಡು ಕಂಗಾಲಾದ ಪ್ರಸಂಗ ಇಂದು ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ನಡೆಯಿತು. ಪ್ರಜಾಧ್ವನಿ ಯಾತ್ರೆ (Prajadhvani Yatre) ಅಂಗವಾಗಿ ಸಿದ್ದರಾಮಯ್ಯ (Siddaramaiah) ಮತ್ತು ಇತರ ಹಲವಾರು ನಾಯಕರೊಂದಿಗೆ ಶಹಾಪುರನಲ್ಲಿ ನಡೆದ ಸಮಾವೇಶದಲ್ಲಿ ಪಾಟೀಲರ ಫೋನ್ ಕಣ್ಮರೆಯಾಯಿತು. ಅವರೇ ಎಲ್ಲಾದರೂ ಬೀಳಿಸಿಕೊಂಡರೋ ಅಥವಾ ಯಾರಾದರೋ ಕದ್ದರೋ ಅನ್ನೋದು ಗೊತ್ತಾಗಲಿಲ್ಲ. ಕಾರ್ಯಕತರೊಬ್ಬರು ವೇದಿಕೆಯ ಮೇಲೆ ನಿಂತು ಯಾರಿಗಾದರೂ ಫೋನ್ ಸಿಕ್ಕಿದ್ದರೆ ದಯವಿಟ್ಟು ತಂದುಕೊಡಿ, ಅದರಲ್ಲಿ ಅತ್ಯಂತ ಮಹತ್ವದ ದಾಖಲೆಗಳಿವೆ ಅಂತ ಮೈಕ್ ಮೂಲಕ ವಿನಂತಿಸಿಕೊಂಡರು. ಆದರೆ ಫೋನ್ ವಾಪಸ್ಸು ಬರಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 10, 2023 07:33 PM