ವಿಶ್ವಕಪ್ ಫೈನಲ್​ನಲ್ಲಿ ಸೋತ ಬಳಿಕ ಪ್ರಧಾನಿ ಮೋದಿ ಆಡಿದ ಮಾತು ನೆನೆದು ಭಾವುಕರಾದ ಮಿಥಾಲಿ ರಾಜ್

ನಾವು ವಿಶ್ವಕಪ್ ಮುಗಿಸಿ ಹಿಂತಿರುಗಿದಾಗ ಪ್ರಧಾನಿ ಮೋದಿ ನಮಗೋಸ್ಕರ ಸಮಯವನ್ನು ನೀಡಿದ್ದರು. ಅವರು ತಂಡದಲ್ಲಿದ್ದ ಎಲ್ಲ ಆಟಗಾರ್ತಿಯನ್ನು ಹೆಸರು ಹೇಳುವ ಮೂಲಕ ನೆನಪಿನಲ್ಲಿ ಇಟ್ಟುಕೊಂಡಿದ್ದರು. ನಾವು ಫೈನಲ್​ನಲ್ಲಿ ಸೋತಿದ್ದರೂ ನಮ್ಮ ತಂಡವನ್ನು ಅವರು ಪ್ರೋತ್ಸಾಹಿಸಿದರು. ನೀವು ಪಂದ್ಯದಲ್ಲಿ ಸೋತಿರಬಹುದು ಆದರೆ, ಎಲ್ಲ ಹೃದಯವನ್ನು ಗೆದ್ದಿದ್ದೀರಿ ಎಂದು ಹೇಳಿದ್ದು ನಮಗೆ ಸ್ಪೂರ್ತಿಯಾಯಿತು, ಎಂದು ಮಿಥಾಲಿ ಹೇಳಿದ್ದಾರೆ.

ವಿಶ್ವಕಪ್ ಫೈನಲ್​ನಲ್ಲಿ ಸೋತ ಬಳಿಕ ಪ್ರಧಾನಿ ಮೋದಿ ಆಡಿದ ಮಾತು ನೆನೆದು ಭಾವುಕರಾದ ಮಿಥಾಲಿ ರಾಜ್
Mithali Raj
Updated By: Vinay Bhat

Updated on: Jul 11, 2022 | 1:46 PM

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಮಿಥಾಲಿ ರಾಜ್ (Mithali Raj) ನಾಯಕತ್ವದಲ್ಲಿ ಭಾರತ ತಂಡ 2017ರ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿತ್ತು. ಆದರೆ, ಇಂಗ್ಲೆಂಡ್ (England) ವಿರುದ್ಧ ಭಾರತ 9 ರನ್‌ಗಳಿಂದ ಸೋಲನುಭವಿಸಿತ್ತು. ಭಾರತ ಸೋಲು ಕಂಡಿದ್ದರೂ ಅಂದು ನೀಡಿದ ಪ್ರದರ್ಶನಕ್ಕೆ ಎಲ್ಲರೂ ತಲೆಬಾಗಿದ್ದರು. ಸೋಲಿನ ನಂತರ ಟೀಮ್ ಇಂಡಿಯಾ ವಾಪಸಾದಾಗ ಇಡೀ ದೇಶವೇ ಅದ್ಧೂರಿ ಸ್ವಾಗತ ನೀಡಿತು. ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಆಟಗಾರರನ್ನು ವಿಶೇಷವಾಗಿ ಬರಮಾಡಿಕೊಂಡಿದ್ದರು. ಈ ಬಗ್ಗೆ ರಿಯಾಲಿಟಿ ಶೋ ಒಂದರಲ್ಲಿ ಸ್ಪರ್ಧಿ ಕೇಳಿದ ಪ್ರಶ್ನೆಗೆ ಮಿಥಾಲಿ ಉತ್ತರಿಸಿದ್ದಾರೆ. “ಅಂದು ಭಾರತಕ್ಕೆ ಹಿಂತಿರುಗಿದಾಗ ಪ್ರಧಾನಿ (Narendra Modi) ಅವರು ಏನು ಹೇಳಿದರು?,” ಎಂದು ಸ್ಪರ್ಧಿಯೊಬ್ಬರು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮಿಥಾಲಿ, “ನಾವು ವಿಶ್ವಕಪ್ ಮುಗಿಸಿ ಹಿಂತಿರುಗಿದಾಗ ಪ್ರಧಾನಿ ಮೋದಿ ನಮಗೋಸ್ಕರ ಸಮಯವನ್ನು ನೀಡಿದ್ದರು. ಅವರು ತಂಡದಲ್ಲಿದ್ದ ಎಲ್ಲ ಆಟಗಾರ್ತಿಯನ್ನು ಹೆಸರು ಹೇಳುವ ಮೂಲಕ ನೆನಪಿನಲ್ಲಿ ಇಟ್ಟುಕೊಂಡಿದ್ದರು. ಪ್ರತಿ ಆಟಗಾರ್ತಿಯರ ಪ್ರಶ್ನೆಗೆ ಪ್ರಧಾನಿ ಉತ್ತರಿಸಿದರು. ಪ್ರಧಾನಿಯಿಂದ ಸಿಕ್ಕಂತಹ ಅತ್ಯುತ್ತಮ ಗೌರವ ಇದು. ನಾವು ಫೈನಲ್​ನಲ್ಲಿ ಸೋತಿದ್ದರೂ ನಮ್ಮ ತಂಡವನ್ನು ಅವರು ಪ್ರೋತ್ಸಾಹಿಸಿದರು. ನೀವು ಪಂದ್ಯದಲ್ಲಿ ಸೋತಿರಬಹುದು ಆದರೆ, ಎಲ್ಲ ಹೃದಯವನ್ನು ಗೆದ್ದಿದ್ದೀರಿ ಎಂದು ಹೇಳಿದ್ದು ನಮಗೆ ಸ್ಪೂರ್ತಿಯಾಯಿತು,” ಎಂದು ಹೇಳಿದ್ದಾರೆ.

Published On - 1:46 pm, Mon, 11 July 22