ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತಾಡಿದ ಭಾರತೀಯ ಮೂಲದ ಸಂಸತ್ ಸದಸ್ಯ ಚಂದ್ರ ಆರ್ಯ ತಮ್ಮ ಹುಟ್ಟೂರಿಗೆ ಆಗಮಿಸಿದ್ದಾರೆ
ಗ್ರಾಮಸ್ಥರು ತಮ್ಮೂರಿನ ಹೆಮ್ಮೆಯ ಕುವರನನ್ನು ಆದರಾಭಿಮಾನದಿಂದ ಬರ ಮಾಡಿಕೊಂಡರು. ಆರ್ಯ ಅವರು ಗಜ್ಜೆರಹಳ್ಳಿಯಲ್ಲಿರುವ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಊರಿನ ಜನ ಅವರನ್ನು ಸನ್ಮಾನಿಸಿದರು.
ತುಮಕೂರು: ಇತ್ತೀಚಿಗಷ್ಟೇ ಕೆನಡಾ ಸಂಸತ್ತಿನಲ್ಲಿ (ಹೌಸ್ ಆಫ್ ಕಾಮನ್ಸ್) (House of Commons) ಕನ್ನಡ ಮಾತಾಡಿ ಕನ್ನಡಿಗರೆಲ್ಲ ಹೆಮ್ಮೆಪಡುವಂತೆ, ಪುಳಕಗೊಳ್ಳುವಂತೆ ಮಾಡಿದ ಭಾರತೀಯ ಮತ್ತು ಕರ್ನಾಟಕ (Karnataka) ಮೂಲದ ಚಂದ್ರಕಾಂತ್ ‘ಚಂದ್ರ’ ಆರ್ಯ (Chandrakant ‘Chandra’ Arya) ತಮ್ಮ ಹುಟ್ಟೂರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿರುವ ದ್ವಾರಾಳು ಗ್ರಾಮಕ್ಕೆ ಆಗಮಿಸಿದ್ದಾರೆ. ಗ್ರಾಮಸ್ಥರು ತಮ್ಮೂರಿನ ಹೆಮ್ಮೆಯ ಕುವರನನ್ನು ಆದರಾಭಿಮಾನದಿಂದ ಬರ ಮಾಡಿಕೊಂಡರು. ಆರ್ಯ ಅವರು ಗಜ್ಜೆರಹಳ್ಳಿಯಲ್ಲಿರುವ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಊರಿನ ಜನ ಅವರನ್ನು ಸನ್ಮಾನಿಸಿದರು.
ಇದನ್ನೂ ಓದಿ: ‘ಎಂಥಾ ಮೂರ್ಖ ಪ್ರಶ್ನೆ ಇದು’; ಆನ್ಲೈನ್ ಸಂದರ್ಶನದಲ್ಲಿ ವಿಡಿಯೋ ಆನ್ ಆಗಿದ್ದು ತಿಳಿಯದೇ ಯುವತಿ ಬೈದ ದೃಶ್ಯ ಇದೀಗ ವೈರಲ್
Latest Videos