US-Israel Strikes On Iran: ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು

Updated on: Mar 01, 2026 | 9:15 PM

ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಹ ಸಾವನ್ನಿದ್ದಾರೆ ಎಂದು ತಿಳಿದುಬಂದಿದೆ. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿದ್ದರು. ಟೆಹರಾನ್‌ ಹೊರವಲಯದ ನರ್ಮಕ್​ ಬಳಿ ಇರುವ ಮಹಮೂದ್ ಅಹ್ಮದಿನೆಜಾದ್ ಅವರ ನಿವಾಸದ ಮೇಲೆ ಕ್ಷೀಪಣಿ ದಾಳಿಯಾಗಿದ್ದು, ಇದರಲ್ಲಿ ಮಹಮೂದ್ ಅಹ್ಮದಿನೆಜಾದ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಟೆಹ್ರಾನ್, (ಮಾರ್ಚ್ 01):‌ ಅಮೆರಿಕ ಹಾಗೂ ಇಸ್ರೇಲ್ (Israeli-US strikes) ಕೊನೆಗೂ ತಮ್ಮ ಗುರಿ ಸಾಧಿಸಿದೆ. ತಮ್ಮ ದೀರ್ಘಕಾಲದ ಶತ್ರುವಿನ ನೆತ್ತರು ಹೀರಿದೆ. ಖಮನೈ ಅಮೆರಿಕದ ಕೆಂಗಣ್ಣಿಗೆ ಅದ್ಯಾವ ಮಟ್ಟಿಗೆ ಗುರಿ ಆಗಿದ್ದ ಅಂದ್ರೆ, ಇಡೀ ಮಧ್ಯಪ್ರಾಚ್ಯದ ಎಲ್ಲಾ ಅರಬ್ ದೇಶಗಳು ಅಮೆರಿಕ, ಇಸ್ರೇಲ್​ಗೆ ಬೆಂಬಲವಾಗಿ ನಿಂತಿದ್ವು. ಆದ್ರೆ ಇರಾನ್ ದೇಶವೊಂದೇ ಏಕಾಂಗಿಯಾಗಿ ಅಮೆರಿಕಕ್ಕೆ ಸೆಡ್ಡು ಹೊಡೆದಿತ್ತು. ಅಣು ಬಾಂಬ್ ತಯಾರಿಕೆ ವಿಚಾರವಾಗಿ ಶುರುವಾದ ಅಮೆರಿಕ-ಖಮನೈ ತಿಕ್ಕಾಟ ಯುದ್ಧದ ಕಾರ್ಮೋಡ ಸೃಷ್ಟಿಸಿತ್ತು. ಆದ್ರೆ ಯಾವುದೇ ಕಾರಣಕ್ಕೂ ಅಮೆರಿಕದ ಗೊಡ್ಡು ಬೆದರಿಕೆಗಳಿಗೆ ಬೆದರೋ ಮಾತೇ ಇಲ್ಲ ಎಂದು ಸೆಡ್ಡು ಹೊಡೆದು ನಿಂತಿದ್ದ ಖಮನೈ ಕಥೆಯನ್ನೇ ಮುಗಿಸಿದೆ. ಇದರ ಬೆನ್ನಲ್ಲೇ ಇಸ್ರೇಲ್‌, ಅಮೆರಿಕ ದಾಳಿಯಲ್ಲಿ ಇರಾನ್ ಮಾಜಿ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಸಹ ಸಾವನ್ನಿದ್ದಾರೆ ಎಂದು ತಿಳಿದುಬಂದಿದೆ. 2005ರಿಂದ 2013ರವರೆಗೆ ಇರಾನ್ ಅಧ್ಯಕ್ಷರಾಗಿದ್ದರು. ಟೆಹರಾನ್‌ ಹೊರವಲಯದ ನರ್ಮಕ್​ ಬಳಿ ಇರುವ ಮಹಮೂದ್ ಅಹ್ಮದಿನೆಜಾದ್ ಅವರ ನಿವಾಸದ ಮೇಲೆ ಕ್ಷೀಪಣಿ ದಾಳಿಯಾಗಿದ್ದು, ಇದರಲ್ಲಿ ಮಹಮೂದ್ ಅಹ್ಮದಿನೆಜಾದ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇರಾನ್​ ಮಧ್ಯಂತರ ಪರಮೋಚ್ಛ ನಾಯಕನ ಹೆಸರು ಘೋಷಣೆ, ಯಾರು ಈ ಅಲಿರೆಜಾ ಅರಾಫಿ?

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More