ಅಳಿಯನ ಸಾವಿನಿಂದ ಮಾಜಿ ಸಚಿವ ಬಿಸಿ ಪಾಟೀಲ್ ಆಘಾತಕ್ಕೊಳಗಾಗಿದ್ದಾರೆ, ಚೇತರಿಕೆಗೆ ಸಮಯ ಬೇಕು

|

Updated on: Jul 09, 2024 | 10:41 AM

ಪ್ರತಾಪ್ ಮದ್ಯವ್ಯಸನಿಯಾಗಿ ವಿಪರೀತ ಅನಿಸುವಷ್ಟು ಕುಡಿಯುತ್ತಿದ್ದರಂತೆ. ಖಿನ್ನತೆಯಿಂದ ಹೊರಬರಲು ಅವರು ಮದ್ಯದ ಮೊರೆಹೊಕ್ಕಿರಬಹುದು ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದರೆ ಪ್ರತಾಪ್ ಇಂಥ ನಿರ್ಧಾರ ತೆಗೆದುಕೊಂಡಾರು ಎಂಬ ಕಲ್ಪನೆ ಪಾಟೀಲ್ ಮನೆಯಲ್ಲಿ ಯಾರಿಗೂ ಇರಲಿಲ್ಲ. ಬೆಳಗ್ಗೆ ಪಾಟೀಲ್ ಅವರೊಂದಿಗೆ ಉಪಹಾರ ಸೇವಿಸಿದ ಪ್ರತಾಪ್ ಊರಿಗೆ ಹೋಗಿ ಬರುತ್ತೇನೆಂದು ಹೋದವರು ಸಾವಿಗೆ ಶರಣಾಗಿದ್ದಾರೆ.

ದಾವಣಗೆರೆ: ಮನೆಮಗನಂತಿದ್ದ ಅಳಿಯನ ಅಕಾಲ ಸಾವಿನಿಂದ ಚೇತರಿಸಿಕೊಳ್ಳಲು ಮಾಜಿ ಸಚಿವ ಬಿಸಿ ಪಾಟೀಲ್ ಅವರಿಗೆ ಬಹಳ ಸಮಯ ಹಿಡಿಯಲಿದೆ. ಇಲ್ಲ್ಲೇನೋ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುತ್ತಿದ್ದಾರೆ ಅದರೆ ಅವರ ಮನೋಬಲ ಕುಸಿದಿದೆ. ರಾಜಕೀಯಕ್ಕೆ ಬರುವ ಮೊದಲು ಅವರು ಪೊಲೀಸ್ ಅಧಿಕಾರಿಯಾಗಿದ್ದರು ಅಂತ ಕನ್ನಡಿಗರಿಗೆ ಗೊತ್ತಿಲ್ಲದಿಲ್ಲ. ನಿನ್ನೆ ಆತ್ಮಹತ್ಯೆಯ ಮೂಲಕ ಸಾವಿಗೆ ಶರಣಾದ ಅವರ ಅಳಿಯ ಕೆಜಿ ಪ್ರತಾಪ್ ಕುಮಾರ್ ಅಂತ್ಯಕ್ರಿಯೆ ಅವರ ಸ್ವಗ್ರಾಮ ದಾವಣಗೆರೆ ಜಿಲ್ಲೆಯ ಕತ್ತಲಗೆರೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಾಟೀಲ್ ನಿನ್ನೆ ಮಧ್ಯಾಹ್ನ ಹೇಳಿದ ಮಾತುಗಳನ್ನೇ ಪುನರಾವರ್ತಿಸಿದರು. ಪ್ರತಾಪ್ ಮನೆ ಮಗನಾಗಿ ತಮ್ಮ ಬಲಗೈಯಂತಿದ್ದ ಎಂದ ಪಾಟೀಲ್ ತೋಟ, ಜಮೀನು ಮತ್ತು ಹೊಲಗದ್ದೆಗಳನ್ನು ಅವನೇ ನೋಡಿಕೊಳ್ಳುತ್ತಿದ್ದ ಎಂದರು. ಪಾಟೀಲ್ ಅವರ ರಾಜಕೀಯ ಚಟುವಟಿಕೆಗಳಲ್ಲೂ ಪ್ರತಾಪ್ ನೆರವಾಗುತ್ತಿದ್ದರಂತೆ. ಮಕ್ಕಳಿಲ್ಲವೆಂಬ ಕೊರಗು ಕಾಡುತ್ತಿದ್ದರಿಂದ ಪ್ರತಾಪ್ ಖಿನ್ನತೆಗೊಳಗಾಗಿದ್ದರು, ಹುಬ್ಭಳ್ಳಿಯಲ್ಲಿ ಸರೋಗೇಸಿ ಮೂಲಕ ಮಗುವನ್ನು ಪಡೆಯುವುದಕ್ಕಾಗಿ ವಕೀಲರ ಜೊತೆ ಮಾತುಕತೆಯೂ ನಡೆಸಿದ್ದರು ಎಂದು ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರತಾಪ್ ಕುಡಿತದ ದಾಸನಾಗಿಬಿಟ್ಟಿದ್ದ, ಮಕ್ಕಳಾಗಲಿಲ್ಲವೆಂಬ ಕೊರಗು ಕಾಡುತಿತ್ತು: ಬಿಸಿ ಪಾಟೀಲ್, ಮಾಜಿ ಸಚಿವ