ಕೆಣಕಿದರೆ ಸುಮ್ಮನಿರಲ್ಲ ಅಂತ ಹೇಳುವ ಕುಮಾರಸ್ವಾಮಿ ನಾಗರಹಾವೇ ಇಲ್ಲ ಹೆಬ್ಬಾವೇ? ಚಲುವರಾಯಸ್ವಾಮಿ
ಶಿವಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವವರು, ಅವರ ಬಗ್ಗೆ ಅಷ್ಟೆಲ್ಲ ಕೀಳಾಗಿ ಮಾತಾಡುವುದು ಒಬ್ಬ ಮಾಜಿ ಮುಖ್ಯಮಂತ್ರಿ ಶೋಭೆ ನೀಡದು, ಶಿವಕುಮಾರ್ ಅವರನ್ನು ಹೆದರಿಸುವ ಬೆದರಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಶಿವಮೊಗ್ಗ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ತೀವ್ರ ಸ್ವರೂಪದ ವಾಗ್ದಾಳಿ ನಡೆಸುತ್ತಿರುವ ಹೆಚ್ ಡಿ ಕುಮಾರಸ್ವಾಮಿಯವರನ್ನು (HD Kumaraswamy) ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Cheluvarayaswamy) ತರಾಟೆಗೆ ತೆಗದುಕೊಂಡರು. ಕುಮಾರಸ್ವಾಮಿ ಬಹಳ ವರ್ಷಗಳಿಂದ ತನಗೆ ಸ್ನೇಹಿತ ಆದರೆ ಈ ಮಟ್ಟಕ್ಕೆ ಇಳಿದು ಅವರು ಮಾತಾಡುತ್ತಾರೆ ಅಂತ ಭಾವಿಸಿರಲಿಲ್ಲ. ಶಿವಕುಮಾರ್ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವವರು, ಅವರ ಬಗ್ಗೆ ಅಷ್ಟೆಲ್ಲ ಕೀಳಾಗಿ ಮಾತಾಡುವುದು ಒಬ್ಬ ಮಾಜಿ ಮುಖ್ಯಮಂತ್ರಿ ಶೋಭೆ ನೀಡದು ಎಂದು ಚಲುವರಾಯಸ್ವಾಮಿ ಹೇಳಿದರು. ಶಿವಕುಮಾರ್ ಅವರನ್ನು ಹೆದರಿಸುವ ಬೆದರಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ನನ್ನನ್ನು ಕೆಣಕಿದರೆ ಸುಮ್ಮನಿರಲ್ಲ ಅನ್ನುವ ಕುಮಾರಸ್ವಾಮಿ ನಾಗರಹಾವೇ ಅಥವಾ ಹೆಬ್ಬಾವೇ? ಇವರಾಡುವ ಮಾತುಗಳಿಂದ ಹೆಚ್ ಡಿ ದೇವೇಗೌಡ ತೀವ್ರವಾಗಿ ನೊಂದುಕೊಂಡಿರುತ್ತಾರೆ ಎಂದು ಸಚಿವ ಹೇಳಿದರು. ಇವರು ಹೆದರಿಸಿದಾಕ್ಷಣ ಶಿವಕುಮಾರ್ ಹೆದರಿಬಿಡುತ್ತಾರೆಯೇ? ಅವರು ಕುಮಾರಸ್ವಾಮಿಗಿಂತ ಹೆಚ್ಚು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ, ಕುಮಾರಸ್ವಾಮಿಯ ಎಲ್ಲ ಸವಾಲುಗಳಿಗೆ ಶಿವಕುಮಾರ್ ತಯಾರಾಗಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ಓದಿ: ಮಂಡ್ಯದಲ್ಲಿ ಹಿಂದೆ ನಾವು ಸೋತಾಗ ಕುಮಾರಸ್ವಾಮಿಯಂತೆ ಚಡಪಡಿಸಿರಲಿಲ್ಲ: ಎನ್ ಚಲುವರಾಯಸ್ವಾಮಿ