Assembly Polls: ಜೆಡಿಎಸ್ ಪಕ್ಷ ಅಧಿಕಾರ ಬರೋದು ಖಚಿತ ಅಂತ ಗೊತ್ತಿರುವ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಅಂತ ಗದ್ಗದಿತರಾದ ಎಚ್ ಕೆ ಕುಮಾರಸ್ವಾಮಿ

|

Updated on: Jan 21, 2023 | 12:00 PM

ಆದರೆ ನಾವು ಅಧಿಕಾರಕ್ಕೆ ಬರುವುದನ್ನು ಮತ್ತು ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಯಾರೂ ನಿಲ್ಲಿಸಲಾಗದು ಎಂದು ಆತ್ಮವಿಶ್ವಾಸ ತುಂಬಿದ ಧ್ವನಿಯಲ್ಲಿ ಕುಮಾರಸ್ವಾಮಿ ಹೇಳಿದರು

Hassan: ಹಿಂದೆ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಎಚ್ ಕೆ ಕುಮಾರಸ್ವಾಮಿ (HK Kumaraswamy) ಅವರಿಗೆ ತಮ್ಮ ಪಕ್ಷದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಅಂತ ಭಾಸವಾಗುತ್ತಿದೆ. ಸಕಲೇಶಪುರದ ಶಾಸಕರಾಗಿರುವ ಅವರು ಶನಿವಾರ ತಮ್ಮ ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುವಾಗ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಅನ್ನೋದು ಖಚಿತವಾಗಿರುವುದರಿಂದ ಕೆಲವರು ಇಲಸಲ್ಲದ ವದಂತಿಗಳನ್ನು ಹಬ್ಬಿಸಿ ತಮ್ಮ ಚಾರಿತ್ರ್ಯವಧೆಯಲ್ಲಿ ತೊಡಗಿದ್ದಾರೆ, ಇದು ಕಳೆದ 14 ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳುವಾಗ ಗದ್ಗಿತರಾದರು. ಆದರೆ ನಾವು ಅಧಿಕಾರಕ್ಕೆ ಬರುವುದನ್ನು ಮತ್ತು ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಯಾರೂ ನಿಲ್ಲಿಸಲಾಗದು ಎಂದು ಆತ್ಮವಿಶ್ವಾಸ ತುಂಬಿದ ಧ್ವನಿಯಲ್ಲಿ ಅವರು ಹೇಳಿದರು. ವಿಡಿಯೋದ ಆಡಿಯೋ ಗುಣಮಟ್ಟ ಸರಿಯಿಲ್ಲದ ಕಾರಣ ಅವರು ಹೇಳುವುದು ಸರಿಯಾಗಿ ಕೇಳಿಸುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published on: Jan 21, 2023 10:59 AM