ದಶಕದ ಹಿಂದೆ ಸಾಮಾನ್ಯ ವ್ಯಕ್ತಿಯಾಗಿದ್ದ ಚಿಲುಮೆ ಸಂಸ್ಥೆ ಸಂಸ್ಥಾಪಕ ರವಿಕುಮಾರ ಈಗ ಕೋಟ್ಯಾಧಿಪತಿ!
ಒಂದು ಭಾರಿ, ಮತ್ತೊಂದು ಡೂಪ್ಲೆಕ್ಸ್ ಮನೆ, ಅಡಿಕೆ ತೋಟಗಳು, ಎಂಟಗಾನಹಳ್ಳಿಯಲ್ಲಿ 5 ಎಕರೆ, ಅಗಳಕುಪ್ಪೆಯಲ್ಲಿ 10 ಗುಂಟೆ ಜಮೀನನ್ನು ರವಿಕುಮಾರ ಹೊಂದಿದ್ದಾರೆ.
ಬೆಂಗಳೂರು: ಚಿಲುಮೆ ಗುಂಪಿನ ಸಂಸ್ಥಾಪಕ ರವಿಕುಮಾರ (Ravikumar) ಸಾಮಾನ್ಯ ಕುಳನೇನೂ ಅಲ್ಲ. ಕೇವಲ 8-10 ವರ್ಷಗಳ ಹಿಂದೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಈ ಸಂಸ್ಥೆಯನ್ನು ಕಟ್ಟಿದ ಬಳಿಕ ಕುಬೇರ (millionaire) ಗುಂಪಿಗೆ ಸೇರಿಬಿಟ್ಟಿದ್ದಾರೆ. ಅವರ ಆಸ್ತಿ ಎಲ್ಲೆಲ್ಲಿದೆ, ಎಷ್ಟೆಷ್ಟಿದೆ ಅನ್ನೋದು ಲೆಕ್ಕಕ್ಕೆ ಸಿಗುತ್ತಿಲ್ಲ. ಟಿವಿ9 ಬೆಂಗಳೂರು ವರದಿಗಾರ ಡಾಬಸ್ ಪೇಟೆಗೆ ಹತ್ತಿರವಿರುವ ರವಿಕಕುಮಾರ ಅವರು ಸ್ವಗ್ರಾಮ ಕಲ್ಲನಾಯಕನಹಳ್ಳಿಗೆ (Kallanayakanahalli) ತೆರಳಿ ಅಲ್ಲಿರುವ ಆಸ್ತಿಯ ಬಗ್ಗೆ ಮಾಹಿತಿಯನ್ನು ಕಲೆಹಾಕಿದ್ದಾರೆ. ವಿಡಿಯೋದಲ್ಲಿ ಕಾಣುತ್ತಿರುವ ಹಾಗೆ ಇಲ್ಲಿ ಒಂದು ಭಾರಿ, ಮತ್ತೊಂದು ಡೂಪ್ಲೆಕ್ಸ್ ಮನೆ, ಅಡಿಕೆ ತೋಟಗಳು, ಎಂಟಗಾನಹಳ್ಳಿಯಲ್ಲಿ 5 ಎಕರೆ, ಅಗಳಕುಪ್ಪೆಯಲ್ಲಿ 10 ಗುಂಟೆ ಜಮೀನನ್ನು ಹೊಂದಿದ್ದಾರೆ.
ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ