Golden Guys: ಇವರು ಅಕ್ಷರಶಃ ಚಿನ್ನದ ಆಸಾಮಿಗಳು! ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೇಗೆ ಬಂದಿದ್ದಾರೆ ನೋಡಿ
ತಿರುಪತಿ ತಿಮ್ಮಪ್ಪನಿಗೆ ಸೆಡ್ಡು ಹೊಡೆಯುವಂತೆ ಕೆಜಿ ಗಟ್ಟಲೆ ಚಿನ್ನಾಭರಣ ಧರಿಸಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತ್ಯಕ್ಷವಾದ ಕುಟುಂಬಸ್ಥರು! ಅವರು ಬಂದಿದ್ದ ಕಾರು ಕೂಡ ಚಿನ್ನದ ಬಣ್ಣದಲ್ಲಿ ಇದ್ದುದು ವಿಶೇಷವಾಗಿತ್ತು. ಖಾಸಗಿ ಭದ್ರತೆಯೊಂದಿಗೆ ತಿರುಮಲಕ್ಕೆ ಬಂದ ಪುಣೆಯ ಈ ಭಕ್ತರು ತಿರುಮಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬೆಲೆಬಾಳುವ ಆ ಕಾರಿಗೆ Golden Guys ಎಂಬ ನಾಮಫಲಕ ಹಾಕಿದ್ದು ಮತ್ತಷ್ಟು ಚಿನ್ನದ ಮೆರುಗು ನೀಡಿತು.
ತಿರುಮಲ ದೇವಸ್ಥಾನ ಇಡೀ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ದೇವಸ್ಥಾನವಾಗಿದೆ. ತಿರುಪತಿ ತಿಮ್ಮಪ್ಪನ ಬಳಿ ಅಪಾರ ವಜ್ರ ವೈಢೂರ್ಯಗಳು, ಟನ್ ಟನ್ ಗಟ್ಟಲೆ ಚಿನ್ನಾಭರಣ ಇದೆ. ತಿರುಮಲ ಶ್ರೀವೇಂಕೇಟೇಶ್ವರ ಸ್ವಾಮಿ ಆ ಪಾಟಿ ಅಲಂಕಾರ ಪ್ರಿಯ. ಆದರೆ ತಿಮ್ಮಪ್ಪನ ಬಳಿಯಿರುವ ಸಂಪತ್ತಿಗೆ ಸೆಡ್ಡು ಹೊಡೆಯುವಂತೆ ಮಹಾರಾಷ್ಟ್ರದ ಕುಟುಂಬವೊಂದು ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರತ್ಯಕ್ಷವಾಗಿದೆ. ಸುಮಾರು ಕೆಜಿಗಟ್ಟಲೆ ಚಿನ್ನಾಭರಣಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಚಿನ್ನ ಲೇಪಿತ ಕಾರಿನಲ್ಲಿ ತಿರುಮಲೈಗೆ ಬಂದು ಭಗವಂತ ಶ್ರೀನಿವಾಸನ ಆಶೀರ್ವಾದ ಪಡೆದುಕೊಂಡಿದ್ದಾರೆ. ಶ್ರೀವಾಣಿ ಟ್ರಸ್ಟ್ಗೆ ಭಾರಿ ದಾನ/ಕೊಡುಗೆಗಳನ್ನು ನೀಡಿದ್ದಾರೆ. ವಿಐಪಿ ಬ್ರೇಕ್ ದರ್ಶನದ ಮೂಲಕ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದಾರೆ.
ಮಹಾರಾಷ್ಟ್ರದ ಕುಟುಂಬವೊಂದು ತಿರುಮಲ ಸ್ವಾಮಿಯ ದರ್ಶನಕ್ಕೆ ಬಂದಿತ್ತು. ಸಾಮಾನ್ಯ ಭಕ್ತರಂತೆ ಕಾಣುವ ಬದಲು ವಿಶೇಷವಾಗಿ/ ವಿಚಿತ್ರವಾಗಿ ಕಾಣುತ್ತಿದ್ದರು. ಕುಟುಂಬದ ನಾಲ್ಕೂ ಮಂದಿ ನೋಡುಗರ ಕಣ್ಣುಕುಕ್ಕುವಂತೆ ತಮ್ಮ ಮೈಮೇಲೆ ಚಿನ್ನದ ಆಭರಣಗಳನ್ನು ಹೇರಿಕೊಂಡು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ದರ್ಶಿಸಿದರು.
25 ಕೆಜಿಗೂ ಹೆಚ್ಚು ಚಿನ್ನದ ಹಾರಗಳನ್ನು ಧರಿಸಿ ಶ್ರೀವಾರಿ ದೇವಸ್ಥಾನದ ಮುಂದೆ ಅಬ್ಬರ ಮೆರೆದರು. ಆ ವೇಳೆ ದರ್ಶನಕ್ಕೆ ಬಂದ ಇತರೆ ಭಕ್ತರು ತೀವ್ರ ಆಶ್ಚರ್ಯಪಟ್ಟರು. ಪುಣೆಯ ಗೋಲ್ಡ್‌ಮನ್ಸ್ ಸನ್ನಿ ನಾನ್ ವಾಗ್ಚೋರಿ, ಸಂಜಯ್ ದತ್ತಾತ್ರೇಯ ಗುಜಾರ್, ಪ್ರೀತಿ ಸೋನಿ ಅಬರುಗಳ ಕೊರಳು ಮತ್ತು ಕೈಗಳಲ್ಲಿ ಚಿನ್ನದ ಆಭರಣಗಳು ಜೋತಾಡುತ್ತಿದ್ದವು. ಇದು ದೇವಾಲಯವು ಒಳಗೆ ಮತ್ತು ಹೊರಗೆ ಎಲ್ಲರ ಗಮನ ಸೆಳೆಯಿತು.
ಅವರು ಬಂದಿದ್ದ ಕಾರು ಕೂಡ ಚಿನ್ನದ ಬಣ್ಣದಲ್ಲಿ ಇದ್ದುದು ವಿಶೇಷವಾಗಿತ್ತು. ಖಾಸಗಿ ಭದ್ರತೆಯೊಂದಿಗೆ ತಿರುಮಲಕ್ಕೆ ಬಂದ ಪುಣೆಯ ಈ ಭಕ್ತರು ತಿರುಮಲಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬೆಲೆಬಾಳುವ ಆ ಕಾರಿಗೆ Golden Guys ಎಂಬ ನಾಮಫಲಕ ಹಾಕಿದ್ದು ಮತ್ತಷ್ಟು ಚಿನ್ನದ ಮೆರುಗು ನೀಡಿತು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ