Bengaluru Video: ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗದಲ್ಲೇ ನಾಲ್ವರು ಯುವಕರಿಂದ ಎಣ್ಣೆ ಪಾರ್ಟಿ
ನಾಲ್ವರು ಯುವಕರು ವಿಧಾನಸೌಧದ ಪೊಲೀಸ್ ಠಾಣೆ ಎದುರೇ ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ.
ಬೆಂಗಳೂರು: ವೀಕೆಂಡ್, ಕ್ರಿಸ್ಮಸ್ ಮತ್ತು ನ್ಯೂಯರ್ ಹಿನ್ನೆಲೆ ಸಿಲಿಕಾನ್ ಸಿಟಿ ಜಗಮಗಿಸುತ್ತಿದೆ. ಎಲ್ಲಿ ನೋಡಿದರು ಯುವಕ-ಯುವತಿಯರು ಫುಲ್ ಎಂಜಾಯ್ ಮೂಡ್ನಲ್ಲಿದ್ದಾರೆ. ಆದರೆ ಎಂಜಾಯ್ ಮಾಡುವಾಗ ಯಾವ ಸ್ಥಳದಲ್ಲಿದ್ದೇವೆ ಎನ್ನುವ ಪರಿಜ್ಞಾನ ಇರಬೇಕು. ಆದರೆ ನಗರದ ನಾಲ್ವರು ಯುವಕರು ಸಾಮಾನ್ಯ ತಿಳುವಳಿಕೆ ಇಲ್ಲದೇ ವಿಧಾನಸೌಧದ (Vidhana Soudha) ಪೊಲೀಸ್ ಠಾಣೆ (Police Station) ಎದುರೇ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ವಿಧಾನಸೌಧ ಠಾಣೆ ಮುಂಭಾಗದ ಪಾರ್ಕ್ನಲ್ಲಿ ನಾಲ್ವರು ಯುವಕರು ಹಾಡಹಗಲೇ ಬಿಯರ್ ಕುಡಿಯುತ್ತ, ಸಿಗರೇಟ್ ಸೇದುತ್ತ, ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.
ಇದನ್ನು ಕಂಡ ಹೊಯ್ಸಳ ಸಿಬ್ಬಂದಿ ಬಿಯರ್ ಕುಡಿಯುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಹೊಯ್ಸಳ ಸಿಬ್ಬಂದಿ ಯುವಕರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.