Vedha Movie: ‘ವೇದ’ ಸಿನಿಮಾ ಯಶಸ್ಸಿನ ಯಾತ್ರೆಯಲ್ಲಿ ರಥ ಬಿಟ್ಟು ಕೆಳಗಿಳಿದ ಶಿವರಾಜ್ಕುಮಾರ್
Shivarajkumar: ‘ವೇದ’ ಚಿತ್ರದ ಯಶಸ್ಸಿನ ಪ್ರಯುಕ್ತ ಬೆಂಗಳೂರಿನಲ್ಲಿ ಶಿವರಾಜ್ಕುಮಾರ್ ಅವರು ರಥ ಯಾತ್ರೆ ಮಾಡಿದರು. ಆದರೆ ಮಾರ್ಗ ಮಧ್ಯೆದಲ್ಲಿ ಅಡೆಚಣೆ ಉಂಟಾಯಿತು.
‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ನಟನೆಯ 125ನೇ ಸಿನಿಮಾ ‘ವೇದ’ (Vedha Movie) ಡಿ.23ರಂದು ಬಿಡುಗಡೆ ಆಯಿತು. ಈ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಈ ಖುಷಿಯಲ್ಲೇ ಇಂದು (ಡಿ.25) ಬೆಂಗಳೂರಿನಲ್ಲಿ ಶಿವರಾಜ್ಕುಮಾರ್ (Shivarajkumar) ಅವರು ರಥ ಯಾತ್ರೆ ಮಾಡಿದ್ದಾರೆ. ಆದರೆ ಮಾರ್ಗ ಮಧ್ಯೆದಲ್ಲಿ ಅಡೆಚಣೆ ಉಂಟಾಗಿದ್ದರಿಂದ ಅವರು ರಥ ಬಿಟ್ಟು ಕೆಳಗೆ ಇಳಿದಿದ್ದಾರೆ. ನಂತರ ಅಭಿಮಾನಿಗಳ ಜೊತೆ ಪಾದ ಯಾತ್ರೆ ಮಾಡಿದ್ದಾರೆ. ಕಾಲ್ನಡಿಗೆಯಲ್ಲಿ ಚಿತ್ರಮಂದಿರಗಳಿಗೆ ಭೇಟಿ ನೀಡಿ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡಿದ್ದಾರೆ ಶಿವಣ್ಣ. ‘ವೇದ’ ಸಿನಿಮಾಗೆ ಎ. ಹರ್ಷ (A Harsha) ನಿರ್ದೇಶನ ಮಾಡಿದ್ದು, ಗೀತಾ ಶಿವರಾಜ್ಕುಮಾರ್ ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

