Vedha Movie: ‘ಆ ಹೆಣ್ಮಕ್ಕಳಿಗೆ ಒಳ್ಳೇ ಹೆಸರು ಬಂದಿದ್ದು ಖುಷಿ’: ‘ವೇದ’ ಗೆಲುವಿನ ಬಗ್ಗೆ ಗೀತಾ ಶಿವರಾಜ್​ಕುಮಾರ್​ ಮಾತು

Shivarajkumar | Vedha: ಶಿವರಾಜ್​ಕುಮಾರ್​ ನಟನೆಯ ‘ವೇದ’ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

Vedha Movie: ‘ಆ ಹೆಣ್ಮಕ್ಕಳಿಗೆ ಒಳ್ಳೇ ಹೆಸರು ಬಂದಿದ್ದು ಖುಷಿ’: ‘ವೇದ’ ಗೆಲುವಿನ ಬಗ್ಗೆ ಗೀತಾ ಶಿವರಾಜ್​ಕುಮಾರ್​ ಮಾತು
| Updated By: Digi Tech Desk

Updated on:Dec 23, 2022 | 5:49 PM

ಬಹುನಿರೀಕ್ಷಿತ ‘ವೇದ’ ಸಿನಿಮಾ ಇಂದು (ಡಿ.23) ಬಿಡುಗಡೆ ಆಗಿದೆ. ಇದು ಗೀತಾ ಶಿವರಾಜ್​ಕುಮಾರ್​ (Geetha Shivarajkumar) ನಿರ್ಮಾಣದ ಮೊದಲ ಸಿನಿಮಾ ಎಂಬುದು ವಿಶೇಷ. ಶಿವಣ್ಣ ನಟಿಸಿದ 125ನೇ ಚಿತ್ರವಾಗಿ ‘ವೇದ’ (Vedha Movie) ಮೂಡಿಬಂದಿದೆ. ಈ ಚಿತ್ರದಲ್ಲಿ ಅವರ ಜೊತೆ ನಟಿಸಿದ ಅದಿತಿ ಸಾಗರ್​ ಮತ್ತು ಗಾನವಿ ಲಕ್ಷ್ಮಣ್​ (Ganavi Laxman) ಅವರಿಗೆ ಖ್ಯಾತಿ ಸಿಕ್ಕಿದೆ. ಅವರ ಪಾತ್ರಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಗೀತಾ ಶಿವರಾಜ್​ಕುಮಾರ್​ ಮಾತಾಡಿದ್ದಾರೆ. ‘ಆ ಇಬ್ಬರು ಹೆಣ್ಮಕ್ಕಳಿಗೆ ಒಳ್ಳೆಯ ಹೆಸರು ಬಂದಿರುವುದು ಖುಷಿ ಆಗಿದೆ’ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:53 pm, Fri, 23 December 22

Follow us