ವೈರಲ್ ವೀಡಿಯೊ: ಉಚಿತ ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರು ಜುಟ್ಟು ಹಿಡಿದು ಕೈ ಕೈ ಮಿಲಾಯಿಸಿದರು!

|

Updated on: Jan 12, 2024 | 12:26 PM

ಮುಥೋಲ್ ನಲ್ಲಿ ಹತ್ತಿದ ಕೆಲ ಮಹಿಳೆಯರು ನಿಜಾಮಾಬಾದ್‌ನಿಂದ ಬಂದ ಬಸ್ ನಲ್ಲಿದ್ದ ಮಹಿಳೆಯರಿಗೆ ಸೀಟು ಕೊಡಲು ಟವಲ್​​ ಹಾಕಿದ್ದರು. ಆದರೆ ಕೆಲ ಮಹಿಳೆಯರು ಯಾಮಾರಿದ್ದಾರೆ. ಆಗ ಜಗಳ ಶುರುವಾಗಿದೆ. ಕಂಡಕ್ಟರ್ ಕಿವಿ ಮಾತು ಹೇಳುತ್ತಿದ್ದರೂ ಮಹಿಳೆಯರಿಗೆ ಕಿವಿ ಕೇಳಿಸಲಿಲ್ಲ. ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್​ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಚುನಾವಣಾ ವಾಗ್ದಾನದಂತೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿಯೋಜನೆಯನ್ನು ಜಾರಿಗೆ ತಂದಿತು. ಅದರಂತೆ ನೆರೆಯ ತೆಲಂಗಾಣ ರಾಜ್ಯದಲ್ಲಿಯೂ ಇತ್ತೀಚೆಗೆ ಕಾಂಗ್ರೆಸ್​​ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಲ್ಲೂ ಉಚಿತ ಬಸ್ ಪ್ರಯಾಣ ಸೌಲಭ್ಯ ಕೊಡಮಾಡಲಾಗಿದೆ. ಆದರೆ ಅಲ್ಲೂ ಇಲ್ಲಿಯಂತೆ ಉಚಿತ ಬಸ್ಸಿನಿಂದಾಗಿ ಮಹಿಳೆಯರು ಬಸ್ ಪ್ರಯಾಣ ಕೈಗೊಳ್ಳುವುದು ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬಸ್ಸುಗಳಲ್ಲಿ ಮಹಿಳೆಯರ ಮಧ್ಯೆ ತಿಕ್ಕಾಟ, ಕಾದಾಟ, ಬಡಿದಾಟ ಗಳು ತೀವ್ರವಾಗುತ್ತಿವೆ.

ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣದಿಂದಾಗಿ ಮಹಿಳಾ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಹಬ್ಬ ಹರಿದಿನವಾದರಂತೂ ಅದು ವಿಪರೀತಕ್ಕೆ ಇಟ್ಟುಕೊಳ್ಲುತ್ತಿದೆ. ಸದ್ಯಕ್ಕೆ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನ ತಮ್ಮ ಊರುಗಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಹಲವೆಡೆ ಆರ್ ಟಿಸಿ ಬಸ್ ಗಳಲ್ಲಿ ಸೀಟ್ ಗಾಗಿ ಮಹಿಳೆಯರು ಕೈ ಕೈ ಮಿಲಾಯಿಸುತ್ತಿದ್ದಾರೆ.

ಇತ್ತೀಚೆಗೆ ನಿರ್ಮಲ್ ಜಿಲ್ಲೆಯ ಮುಥೋಲ್ ಮಂಡಲ ಕೇಂದ್ರದಲ್ಲಿ ಆರ್ ಟಿಸಿ ಬಸ್ಸಿನಲ್ಲಿ ಮಹಿಳೆಯರು ಜುಟ್ಟು ಹಿಡಿದು ಜಗಳವಾಡಿದ್ದರು. ಮುಧೋಳ ಮಂಡಲದ ಮಧ್ಯಭಾಗದ ಬಸ್ ನಿಲ್ದಾಣದಲ್ಲಿ, ಮಹಿಳೆಯರು ಮಹಾರಾಷ್ಟ್ರದ ಭೈಂಸಾದಿಂದ ಧರ್ಮಾಬಾದ್‌ಗೆ ತೆರಳುತ್ತಿದ್ದ ಆರ್‌ಟಿಸಿ ಬಸ್‌ನಲ್ಲಿ ಆಸನಕ್ಕಾಗಿ ನೂಕುನುಗ್ಗಲು ನಡೆಸಿದರು. ಸೀಟಿಗಾಗಿ ಮಹಿಳೆಯರು ತೀವ್ರ ಜಗಳವಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ನಿಜಾಮಾಬಾದ್‌ನಿಂದ ಭೈಂಸಾಗೆ ಬರುತ್ತಿದ್ದ ಆರ್‌ಟಿಸಿ ಬಸ್ ಗುರುವಾರ ಮಧ್ಯಾಹ್ನ ಮುಥೋಲ್ ತಲುಪಿತು. ಆ ಬಸ್ಸಿನಲ್ಲಿ ಕೆಲವು ಆಸನಗಳು ಖಾಲಿಯಾಗಿದ್ದವು. ಜೊತೆಗೆ ಎರಡು ಬಸ್‌ಗಳು ಈಗಾಗಲೇ ಕೆಟ್ಟು ನಿಂತಿದ್ದವು. ಹೀಗಾಗಿ ಅನೇಕ ಪ್ರಯಾಣಿಕರು ನಿಜಾಮಾಬಾದ್‌ನಿಂದ ಬಂದ ಬಸ್‌ಗೆ ಏರಿದರು. ಮುಥೋಲ್ ನಲ್ಲಿ ಹತ್ತಿದ ಕೆಲ ಮಹಿಳೆಯರು ಬಸ್ ನಲ್ಲಿದ್ದ ಮಹಿಳೆಯರಿಗೆ ಸೀಟು ಕೊಡಲು ಟವಲ್​​ ಹಾಕಿದ್ದರು. ಆದರೆ ಕೆಲ ಮಹಿಳೆಯರು ಯಾಮಾರಿದ್ದಾರೆ. ಆಗ ಜಗಳ ಶುರುವಾಗಿದೆ. ಕಂಡಕ್ಟರ್ ಕಿವಿ ಮಾತು ಹೇಳುತ್ತಿದ್ದರೂ ಮಹಿಳೆಯರಿಗೆ ಕಿವಿ ಕೇಳಿಸಲಿಲ್ಲ. ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ. ಈ ಮಧ್ಯೆ ಬಸ್ಸಿನಲ್ಲಿದ್ದ ಇತರ ಕೆಲವು ಪ್ರಯಾಣಿಕರು ಇದನ್ನೆಲ್ಲಾ ವಿಡಿಯೋ ಮಾಡಿದ್ದಾರೆ. ಇದೀಗ ಆ ವಿಡಿಯೋ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Follow us on