Bengaluru Kambala; ಕರಾವಳಿ ಪ್ರದೇಶದಿಂದ ಆಗಮಿಸಿರುವ ಜನಕ್ಕೆ ಉಚಿತ ಊಟದ ವ್ಯವಸ್ಥೆ: ಮಧುಕರ್ ಶೆಟ್ಟಿ, ಆಯೋಜಕ
Bengaluru Kambala; ಮಧುಕರ್ ಶೆಟ್ಟಿಯವರು ಹೇಳುವ ಪ್ರಕಾರ ನಾಳೆ 4 ರಿಂದ 5 ಲಕ್ಷ ಜನ ಬೆಂಗಳೂರು ಕಂಬಳ ವೀಕ್ಷಿಸಲು ಆಗಮಿಸಲಿದ್ದಾರೆ. ಅರಮನೆ ಮೈದಾನಕ್ಕೆ ಬರಲಿರುವ ಜನರ ಪೈಕಿ ಹೆಚ್ಚಿನವರು ಕರಾವಳಿ ಪ್ರದೇಶದವರಾಗಲಿರುವುದರಿಂದ ಪುಡ್ ಸ್ಟಾಲ್ ಗಳ ಮುಂದೆ ನೂಕುನುಗ್ಗಲುನಂಥ ಸ್ಥಿತಿ ನಿರ್ಮಾಣವಾಗಲಾರದು; ಯಾಕೆಂದರೆ ಕರಾವಳಿ ಭಾಗದ ಜನ ಸಹನಶೀಲರು, ಊಟಕ್ಕಾಗಿ ತಾಳ್ಮೆಯಿಂದ ಕಾಯುತ್ತಾರೆ ಎಂದು ಅವರು ಹೇಳುತ್ತಾರೆ.
ಬೆಂಗಳೂರು: ನಗರದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಬೆಂಗಳೂರು ಕಂಬಳಕ್ಕೆ (Bengaluru Kambala) ಕ್ಷಣಗಣನೆ ಶುರುವಾಗಿದೆ. ಕರಾವಳಿ ಭಾಗದಿಂದ ಸುಮಾರು 180 ಜೋಡಿ ಕೋಣಗಳು ಈಗಾಗಲೇ ಆರಮನೆ ಮೈದಾನಕ್ಕೆ ಅಗಮಿಸಿದ್ದು ನಾಳೆ ಬೆಳಗ್ಗೆಯಿಂದ ಅವು ಟ್ರ್ಯಾಕ್ ಗಿಳಿಯಲಿವೆ. ಕೋಣಗಳ ಜೊತೆ ಓಡುವ ಸ್ಪರ್ಧಾಳುಗಳು ಮತ್ತು ಬೆಂಗಳೂರು ಕಂಬಳವನ್ನು ವೀಕ್ಷಿಸಲು ಕರಾವಳಿ ಭಾಗದಿಂದ (coastal region) ಬಂದಿರುವ ಸುಮಾರು 4,000 ಜನರಿಗೆ ಆಯೋಜಕರು ಉಚಿತ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ. ವ್ಯವಸ್ಥೆ ಬಗ್ಗೆ ರಾಜ್ಯ ಹೋಟೆಲ್ ಗಳ ಸಂಘದ ಉಪಾಧ್ಯಕ್ಷರಾಗಿರುವ ಮಧುಕರ್ ಶೆಟ್ಟಿ (Madhukar Shetty) ಟಿವಿ9 ಕನ್ನಡ ವಾಹಿನಿಯ ವರದಿಗಾರ್ತಿಗೆ ವಿವರಿಸಿದ್ದಾರೆ. ನಿನ್ನೆ ರಾತ್ರಿಯೆಲ್ಲ ಕರಾವಳಿಯ ಬೇರೆ ಬೇರೆ ಊರುಗಳಿಂದ ಜನ ಆಗಮಿಸುತ್ತಿದ್ದರಿಂದ ಅವರಿಗಾಗಿ ಊಟದ ವ್ಯವಸ್ಥೆಯನ್ನು ಬೆಳಗ್ಗೆ 5.30 ರವರೆಗೆ ಮಾಡಲಾಗಿತ್ತು ಎಂದು ಶೆಟ್ಟಿ ಹೇಳುತ್ತಾರೆ. ನಾಳೆ ಕಂಬಳ ವೀಕ್ಷಿಸಲು ಬರುವ ಜನರಿಗಾಗಿ ಸುಮಾರು 60 ಫುಡ್ ಸ್ಟಾಲ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ ಶೆಟ್ಟಿ ಎಲ್ಲ ಸ್ಟಾಲ್ ಗಳಲ್ಲಿ ಕರಾವಳಿಯ ತಿಂಡಿ ತಿನಿಸು ಲಭ್ಯ ಇರುತ್ತವೆ ಎಂದರು. ಆದರೆ ವೀಕ್ಷಕರು ತಮ್ಮ ಊಟ ತಿಂಡಿಗಾಗಿ ಹಣ ಪಾವತಿಸಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ