ಮಹಿಳೆಯರ “ಶಕ್ತಿ” ಗೆ ಮುರಿದ ಸರ್ಕಾರಿ ಬಸ್​ ಡೋರ್​, ಹೆಣ್ಮಕ್ಳೆ ಸ್ಟ್ರಾಂಗು ಗುರು..! ಇಲ್ಲಿದೆ ವಿಡಿಯೋ

|

Updated on: Jun 17, 2023 | 10:03 PM

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ​ ನಾ ಮುಂದು ತಾ ಮುಂದು ಎಂದು ಬಸ್​​ ​ಹತ್ತುವಾಗ ಮಹಿಳಾ ಮಣಿಗಳು ಶಕ್ತಿ ಪ್ರದರ್ಶನ ಮಾಡಿದ್ದು, ಬಸ್​​ ಬಾಗಿಲನ್ನೇ ಮುರಿದು ಹಾಕಿದ್ದಾರೆ.

ಚಾಮರಾಜನಗರ: ಶಕ್ತಿ ಯೋಜನೆ (Shakti Yojana) ಅಡಿ ರಾಜ್ಯ ಸರ್ಕಾರ (Karnataka Government) ನಾನ್​ ಎಸಿ ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Bus Travel) ಅವಕಾಶ ಮಾಡಿಕೊಟ್ಟಿದೆ. ಜೂ.11 ರಂದು ಈ ಯೋಜನೆಗೆ ಚಾಲನೆ ದೊರೆತಿದ್ದು, ಅಂದಿನಿಂದ-ಇಂದಿನವರೆಗು ನಾನ್​ ಎಸಿ ಬಸ್​ಗಳು ಫುಲ್​ ರಶ್​ ಆಗಿವೆ. ಉಚಿತ ಪ್ರಯಾಣ ಹಿನ್ನೆಲೆ ಮಹಿಳೆಯರು ದೇಗುಲ ಹಾಗೂ ಇನ್ನೀತರ ಸ್ಥಳಕ್ಕೆ ತೆರಳುತ್ತಿದ್ದು, ಬಸ್​ ಫುಲ್​ ಆಗಿವೆ. ಹೀಗೆ ರಶ್​ ಆದ ಚಾಮರಾಜನಗರ (Chamarajanagar) ಜಿಲ್ಲೆಯ ಕೊಳ್ಳೇಗಾಲದಲ್ಲಿ​ ನಾ ಮುಂದು ತಾ ಮುಂದು ಎಂದು ಬಸ್​​ ​ಹತ್ತುವಾಗ ಮಹಿಳಾ ಮಣಿಗಳು ಶಕ್ತಿ ಪ್ರದರ್ಶನ ಮಾಡಿದ್ದು, ಬಸ್​​ ಬಾಗಿಲನ್ನೇ ಮುರಿದು ಹಾಕಿದ್ದಾರೆ.

ಹೌದು ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಇಂದು (ಜೂ.17) ಮಲೈ ಮಹದೇಶ್ವರ ಬೆಟ್ಟದತ್ತ ಮಹಿಳೆಯರು ಹೆಚ್ಚಾಗಿ ಹೊರಟಿದ್ದಾರೆ. ಕೊಳ್ಳೇಗಾಲದಲ್ಲಿ ಮಹಿಳೆಯರು ನೂಕು ನುಗ್ಗಲಿನಿಂದ ಜಿದ್ದಿಗೆ ಬಿದ್ದು ಬಸ್ ಹತ್ತಲು ಹೋಗಿ ಬಾಗಿಲನ್ನೇ ಮುರಿದು ಹಾಕಿದ್ದಾರೆ. ಈ ಘಟನೆಯಿಂದ ಬಸ್‌ ಕಂಡಕ್ಟರ್‌ ಅವರು, ದಿಕ್ಕು ತೋಚದೆ ಪೆಚ್ಚು ಮೋರೆ ಹಾಕಿ ನಿಂತುಕೊಂಡಿದ್ದರು.

Published On - 9:56 pm, Sat, 17 June 23

Follow us on