ಮುಂಬೈನ ಫುಟ್​ಪಾತ್​​ನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜಾಗಿಂಗ್; ಕಣ್ಣೆತ್ತೂ ನೋಡದ ಜನ!

Updated on: Feb 17, 2026 | 5:22 PM

ಮುಂಬೈಗೆ ತಮ್ಮ 3 ದಿನಗಳ ಭೇಟಿಗೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರನ್ ಇಂದು ಮುಂಬೈನ ರಸ್ತೆ ಬದಿಯ ಫುಟ್​ಪಾತ್​​ನಲ್ಲಿ ಜಾಗಿಂಗ್ ಮಾಡಿದ್ದಾರೆ. ಆದರೆ, ಈ ವೇಳೆ ಅಲ್ಲಿದ್ದ ಯಾರಿಗೂ ಅವರು ಫ್ರಾನ್ಸ್​ ದೇಶದ ಅಧ್ಯಕ್ಷ ಎಂಬುದು ಗೊತ್ತೇ ಆಗಿಲ್ಲ. ಹೀಗಾಗಿ, ಯಾರೂ ಕೂಡ ಅವರತ್ತ ತಿರುಗಿಯೂ ನೋಡಿಲ್ಲ. ಮ್ಯಾಕ್ರನ್ ತಮ್ಮಷ್ಟಕ್ಕೆ ತಾವೇ ತಮ್ಮ ಸಿಬ್ಬಂದಿಯ ಜೊತೆ ಜಾಗಿಂಗ್ ಮಾಡಿದ್ದಾರೆ. ಈ ವೇಳೆ ಪೊಲೀಸರು ಭದ್ರತಾ ವ್ಯವಸ್ಥೆ ಕೂಡ ಮಾಡಿದ್ದರು.

ಮುಂಬೈ, ಫೆಬ್ರವರಿ 17: ಫ್ರೆಂಚ್ ಅಧ್ಯಕ್ಷ ಎಮ್ಯಾನ್ಯುಯೆಲ್ ಮ್ಯಾಕ್ರನ್ (Emmanuel Macron India Visit) 3 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಈ ಬಾರಿ ಅವರು ದೆಹಲಿಯ ಬದಲು ಮುಂಬೈಗೆ ತೆರಳಿದ್ದಾರೆ. ಇಂದು ಬೆಳಗ್ಗೆ ಮ್ಯಾಕ್ರನ್ ಅವರು ಮುಂಬೈನ ಫುಟ್​ಪಾತ್ ಮೇಲೆ ತಮ್ಮ ಸಿಬ್ಬಂದಿಯ ಜೊತೆ ಜಾಗಿಂಗ್ ಮಾಡಿದ್ದಾರೆ. ಆದರೆ, ಅಲ್ಲಿದ್ದವರಿಗೆ ಅವರು ಯಾರೆಂದು ಗುರುತು ಸಿಕ್ಕಿಲ್ಲ. ಹೀಗಾಗಿ, ಯಾರೂ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮುಂಬೈಗೆ ಆಗಮಿಸಿದ ಕೆಲವೇ ಗಂಟೆಗಳ ನಂತರ ಮ್ಯಾಕ್ರನ್ ನಗರದಲ್ಲಿ ಜಾಗಿಂಗ್ ಮಾಡುತ್ತಿರುವ ದೃಶ್ಯ ಕಂಡುಬಂದಿತು. ಆದರೆ, ಬಹುತೇಕ ಜನರಿಗೆ ತಮ್ಮ ನಡುವೆ ಜಾಗಿಂಗ್ ಮಾಡುತ್ತಿದ್ದವರು ಫ್ರಾನ್ಸ್ ಅಧ್ಯಕ್ಷ ಎಂಬುದು ಗೊತ್ತೇ ಆಗಲಿಲ್ಲ. ಈ ಸುದ್ದಿ ಚಾನೆಲ್​, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ನಂತರ ಅವರಿಗೆ ಈ ವಿಷಯ ಗೊತ್ತಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Feb 17, 2026 05:19 PM
Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More