‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಎನ್ನುತ್ತ ಮತ್ತೆ ಚಿತ್ರರಂಗಕ್ಕೆ ಬಂದ ‘ಫ್ರೆಂಡ್ಸ್​’ ಸಿನಿಮಾ ವಾಸು

|

Updated on: Apr 07, 2024 | 1:06 PM

‘ಆರಾಮಾಗಿ ನಾನು ವ್ಯವಸಾಯ ಮಾಡಿಕೊಂಡಿದ್ದೇನೆ. ಬಹಳ ದಿನಗಳ ಬಳಿಕ ನಿಮ್ಮನ್ನೆಲ್ಲ ಭೇಟಿ ಮಾಡಿದ್ದೇನೆ. ನಿರ್ಮಾಪಕ ವೆಂಕಟೇಶ್​ ಹಾಗೂ ನನ್ನದು ತುಂಬ ಹಳೆಯ ಸ್ನೇಹ. ಅವರಿಗೋಸ್ಕರ ನಾನು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಲು ಒಪ್ಪಿಕೊಂಡಿದ್ದೇನೆ. ಅವರು ದೊಡ್ಡ ದೊಡ್ಡ ಸಿನಿಮಾಗಳನ್ನು ಮಾಡಬೇಕು’ ಎಂದು ವಾಸು ಹೇಳಿದ್ದಾರೆ. ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಸಿನಿಮಾ ವಾಸು ನಟಿಸುತ್ತಿದ್ದಾರೆ.

2002ರಲ್ಲಿ ಕನ್ನಡದ ‘ಫ್ರೆಂಡ್ಸ್​’ ಸಿನಿಮಾ (Friends Movie) ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ವಾಸು ನಟನೆ ಗಮನ ಸೆಳೆದಿತ್ತು. ಚಿತ್ರರಂಗದಲ್ಲಿ ಅಪರೂಪ ಆಗಿರುವ ಅವರು ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ (Badavara Maklu Belibeku Kanrayya) ಸಿನಿಮಾದಲ್ಲಿ ವಾಸು ಅವರು ಒಂದು ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಆಗ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು. ಈ ಸಿನಿಮಾಗೆ ಮಂಜು ಕವಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿ.ಎಸ್. ವೆಂಕಟೇಶ್ ಅವರು ಬಂಡವಾಳ ಹೂಡುತ್ತಿದ್ದಾರೆ. ‘ನಾನು ಆರಾಮಾಗಿ ವ್ಯವಸಾಯ ಮಾಡಿಕೊಂಡು ಇದ್ದೇನೆ. ತುಂಬ ದಿನಗಳ ಬಳಿಕ ನಿಮ್ಮನ್ನೆಲ್ಲ ಭೇಟಿ ಮಾಡಿದ್ದೇನೆ. ನಿರ್ಮಾಪಕ ವೆಂಕಟೇಶ್​ ಮತ್ತು ನನ್ನದು ತುಂಬ ಹಳೆಯ ಒಡನಾಟ. ಅವರನ್ನು ನಿರ್ಮಾಪಕರನ್ನಾಗಿ ಮಾಡಬೇಕು ಎಂದು ನಾನು 15 ವರ್ಷಗಳಿಂದ ಪ್ರಯತ್ನಿಸಿದ್ದೆ. ಆದರೆ ಮಂಜು ಕವಿ ಅದನ್ನು ಸಾಧ್ಯವಾಗಿಸಿದ್ದಾರೆ. ವೆಂಕಟೇಶ್​ ಅವರಿಗೋಸ್ಕರ ನಾನು ಅತಿಥಿ ಪಾತ್ರ ಮಾಡಲು ಒಪ್ಪಿಕೊಂಡಿದ್ದೇನೆ. ಅವರು ದೊಡ್ಡ ದೊಡ್ಡ ಸಿನಿಮಾ ಮಾಡಬೇಕು. ದೇವರು ಅವರಿಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಅಂಥವರು ಚಿತ್ರರಂಗಕ್ಕೆ ಬಂದರೆ ಒಳ್ಳೆಯದು’ ಎಂದು ವಾಸು (Friends Vasu) ಹೇಳಿದ್ದಾರೆ. ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಸಿನಿಮಾದಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ಸಂಗೀತಾ ಅವರು ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.