ಅಡಿಕೆಯಿಂದ ಕೋಟ್ಯಧಿಪತಿ ಆಗಬಹುದು ಗೊತ್ತಾ? ಇಲ್ಲಿದೆ ನೋಡಿ ಅಧ್ಯಾತ್ಮ ರಹಸ್ಯ

| Updated By: Ganapathi Sharma

Updated on: Feb 06, 2025 | 6:46 AM

ಭಾರತೀಯ ಸಂಸ್ಕೃತಿಯಲ್ಲಿ, ಸನಾಥನ ಹಿಂದೂ ಸಂಸ್ಕೃತಿಯಲ್ಲಿ ಅಡಿಕೆಗೆ ವಿಶೇಷ ಮಹತ್ವವಿದೆ. ಧಾರ್ಮಿಕವಾಗಿಯೂ ಅಡಿಕೆ ಬಹಳ ಮುಖ್ಯವಾದದ್ದು. ಈ ಅಡಿಕೆಯಿಂದಲೇ ಕೋಟ್ಯಧಿಪತಿ ಕೂಡ ಆಗಬಹುದು ಹೇಗೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.

ಮಹಾಲಕ್ಷ್ಮಿಯ ಸ್ವರೂಪ, ಮಂಗಳಕರ ವಸ್ತು ಎಂದು ನಾವು ಪರಿಗಣಿಸತಕ್ಕಂತದ್ದು ಅಡಿಕೆ. ಯುಗ ಯುಗಗಳಲ್ಲೂ ಇತಿಹಾಸದಲ್ಲೂ, ಪೂರ್ವಿಕರಲ್ಲೂ ಏನೇ ಬದಲಾವಣೆ ಆಗಿದ್ದರೂ ಅಡಿಕೆಯಲ್ಲಿ ಮಾತ್ರ ಬದಲಾವಣೆ ಆಗಿಲ್ಲ. ಅಡಿಕೆ ಎಷ್ಟು ಮಂಗಳದ ಒಂದು ದ್ರವ್ಯ ಎಂದರೆ ಅಡಿಕೆಯಿಂದ ಏನೇನೂ ಒಳಿತು ಆಗಬಹುದು. ದುಷ್ಟಶಕ್ತಿಗಳನ್ನು ದೂರ ಮಾಡುವ, ನಿರ್ವಿಘ್ನತೆ ಉಂಟು ಮಾಡುವ ಮಹಾ ಸಾಧ್ಯತೆ ಕೂಡ ಅಡಿಕೆಯಲ್ಲಿದೆ. ಅಡಿಕೆಯಿಂದ ಹೇಗೆ ಶ್ರೀಮಂತರಾಗಬಹುದು? ಅಡಿಕೆಯನ್ನು ಧಾರ್ಮಿಕವಾಗಿ ಹೇಗೆ ಬಳಸಬೇಕು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.