G20 Summit 2023 in Delhi: ಪ್ರಗತಿ ಮೈದಾನದಲ್ಲಿ ಭವ್ಯವಾಗಿ ಸಜ್ಜಾಗಿರುವ ಭಾರತ್ ಮಂಟಪಂಗೆ ವಿದೇಶಿ ಗಣ್ಯರನ್ನು ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ

G20 Summit 2023 in Delhi: ಪ್ರಗತಿ ಮೈದಾನದಲ್ಲಿ ಭವ್ಯವಾಗಿ ಸಜ್ಜಾಗಿರುವ ಭಾರತ್ ಮಂಟಪಂಗೆ ವಿದೇಶಿ ಗಣ್ಯರನ್ನು ಬರಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 09, 2023 | 12:05 PM

G20 Summit 2023 in Delhi: ಈಗಾಗಲೇ ವರದಿಯಾಗಿರುವಂತೆ ಜಿ20 ಶೃಂಗ ಸಭೆಯ ಘೋಷವಾಕ್ಯ ವಸುದೈವ ಕುಟುಂಬಕ್ಕಂ-ಒಂದು ಪೃಥ್ವಿ-ಒಂದು ಕುಟುಂಬ-ಒಂದು ಭವಿಷ್ಯ ಆಗಿದೆ. ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿರುವ ಜಿ20 ಶೃಂಗ ಸಭೆ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯಲಿದೆ.

ನವದೆಹಲಿ: ಭಾರತದ ಪರಂಪರೆ, ಸಂಸ್ಕೃತಿ-ಸಂಪ್ರದಾಯವನ್ನು ಪ್ರತಿಬಿಂಬಿಸುವ ಮತ್ತು ನಗರದ ಪ್ರಗತಿ ಮೈದಾನದಲ್ಲಿ ಭವ್ಯವಾಗಿ ಸಜ್ಜಾಗಿರುವ ಭಾರತ್ ಮಂಟಪಂ (Bharat Mandapam) ನಲ್ಲಿ ಭಾರತ ನೇತೃತ್ವ ವಹಿಸಿರುವ ಜಿ20 ಶೃಂಗ ಸಭೆ ಆರಂಭಗೊಂಡಿದೆ. ಮಂಟಪಂಗೆ ಆಗಮಿಸುತ್ತಿರುವ ಬೇರೆ ಬೇರೆ ರಾಷ್ಟ್ರಗಳ ಅಧ್ಯಕ್ಷ, ಪ್ರಧಾನ ಮಂತ್ರಿ, ಚಾನ್ಸ್ ಲರ್ ಹಾಗೂ ದೊರೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಬರಮಾಡಿಕೊಳ್ಳುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ಗಣ್ಯರಲ್ಲದೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF), ವಿಶ್ವಸಂಸ್ಥೆ (UN), ವಿಶ್ವ ಬ್ಯಾಂಕ್ (World bAnk), ವಿಶ್ವ ವ್ಯಾಪಾರ ಕೇಂದ್ರ (WTO), ವಿಶ್ವ ಆರೋಗ್ಯ ಸಂಸ್ಥೆ (WHO) ಮೊದಲಾದ ಸಂಸ್ಥೆಗಳ ಪಧಾದಿಕಾರಿಗಳು, ಅತಿಥಿಗಳನ್ನೂ ಪ್ರಧಾನಿ ಮೋದಿ ಬರಮಾಡಿಕೊಂಡರು. ಈಗಾಗಲೇ ವರದಿಯಾಗಿರುವಂತೆ ಜಿ20 ಶೃಂಗ ಸಭೆಯ ಘೋಷವಾಕ್ಯ ವಸುದೈವ ಕುಟುಂಬಕ್ಕಂ-ಒಂದು ಪೃಥ್ವಿ-ಒಂದು ಕುಟುಂಬ-ಒಂದು ಭವಿಷ್ಯ ಆಗಿದೆ. ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿರುವ ಜಿ20 ಶೃಂಗ ಸಭೆ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ