ಭೀಕರ ಬರಗಾಲದ ನಡುವೆಯೂ ಸಮೃದ್ಧ ಬೆಳೆ, ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ 30 ಟ್ರ್ಯಾಕ್ಟರ್ ಮೇವು ನೀಡಿದ ರೈತರು

ಭೀಕರ ಬರಗಾಲದ ನಡುವೆಯೂ ಸಮೃದ್ಧ ಬೆಳೆ, ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ 30 ಟ್ರ್ಯಾಕ್ಟರ್ ಮೇವು ನೀಡಿದ ರೈತರು

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ವಿವೇಕ ಬಿರಾದಾರ

Updated on:Mar 04, 2024 | 8:09 AM

ಭೀಕರ ಬರದಲ್ಲೂ ಗದಗ ಜಿಲ್ಲೆಯ ರೈತರು ಔದಾರ್ಯ ಮೆರೆದಿದ್ದಾರೆ. ಹೌದು ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ರೈತರು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ 30 ಟ್ರ್ಯಾಕ್ಟರ್ ಮೇವು ನೀಡಿದ್ದಾರೆ. ಮಾಡಲಗೇರಿ ಗ್ರಾಮದ ರೈತರು ಪ್ರತಿ ವರ್ಷ ಹುಬ್ಬಳ್ಳಿ ಸಿದ್ದಾರೂಢ ಮಠದ ಗೋ ಶಾಲೆಗೆ ಸುಮಾರು 30 ಟ್ರ್ಯಾಕರ್​ನಷ್ಟು ಮೇವು ನೀಡುತ್ತಾ ಬಂದಿದ್ದಾರೆ.

ಗದಗ, ಮಾರ್ಚ್​ 04: ರಾಜ್ಯದಲ್ಲಿನ ಭೀಕರ ಬರ (Drought) ಅನ್ನದಾತರ ಜೀವ ಹಿಂಡುತ್ತಿದೆ. ಬಿತ್ತಿದ ಬೆಳೆಗಳು ನೆಲಬಿಟ್ಟು ಎದ್ದಿಲ್ಲ. ಹೀಗಾಗಿ ಲಕ್ಷ ಲಕ್ಷ ಸಾಲ ಮಾಡಿ ಬಿತ್ತಿನೆ ಮಾಡಿದ ಬೆಳೆಗಳು ಕೈಕೊಟ್ಟಿದ್ದರಿಂದ ರೈತರ ಸ್ಥಿತಿ ಅಯೋಮಯವಾಗಿದೆ. ತಮ್ಮ ಸಂಸಾರದ ಬಂಡಿ ಸಾಗಿಸಲು ಕಷ್ಟ ಕಷ್ಟ ಎನ್ನುವಂತಾಗಿದೆ. ಇಂತಹ ಭೀಕರ ಬರದಲ್ಲೂ ಗದಗ (Gadag) ಜಿಲ್ಲೆಯ ರೈತರು (Farmers) ಔದಾರ್ಯ ಮೆರೆದಿದ್ದಾರೆ. ಹೌದು ಗದಗ ಜಿಲ್ಲೆಯ ರೋಣ (Rona) ತಾಲೂಕಿನ ಮಾಡಲಗೇರಿ ಗ್ರಾಮದ ರೈತರು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ (Hubballi Siddaroodh Math) 30 ಟ್ರ್ಯಾಕ್ಟರ್ ಮೇವು ನೀಡಿದ್ದಾರೆ. ಮಾಡಲಗೇರಿ ಗ್ರಾಮಕ್ಕೆ ತಾಯಿ ಬನಶಂಕರಿದೇವಿ ಆಶೀರ್ವಾದ ಇದೆ ಎಂಬ ನಂಬಿಕೆ ಗ್ರಾಮಸ್ಥರದ್ದು. ನಾಡಿನ ತುಂಬೆಲ್ಲ ಬರಗಾಲದ ಛಾಯೆ ಆವರಿಸಿದೆ. ಆದರೆ ಈ ಗ್ರಾಮದ ಪ್ರತಿಯೊಬ್ಬ ರೈತರು ಸಾಕಾಗುವಷ್ಟು ಜೋಳ ಬೆಳೆದಿದ್ದಾರೆ. ಪ್ರತಿ ಎಕರೆಗೆ 8 ರಿಂದ 10 ಚೀಲದವರೆಗೆ ಇಳುವರಿ ಬಂದಿದೆ. ಮಾಡಲಗೇರಿ ಗ್ರಾಮದ ರೈತರು ಪ್ರತಿ ವರ್ಷ ಹುಬ್ಬಳ್ಳಿ ಸಿದ್ದಾರೂಢ ಮಠದ ಗೋ ಶಾಲೆಗೆ ಸುಮಾರು 30 ಟ್ರ್ಯಾಕರ್​ನಷ್ಟು ಮೇವು ನೀಡುತ್ತಾ ಬಂದಿದ್ದಾರೆ. ಪ್ರತಿ ವರ್ಷ ರೈತರು ಮಠಕ್ಕೆ ಮೇವು ಮುಟ್ಟಿಸಿ ಸ್ವತಃ ಬಣವಿಯನ್ನು ಒಟ್ಟಿ ಬರುತ್ತಾರೆ. ಸ್ವಂತ ಖರ್ಚಿನಲ್ಲಿ ಮಠಕ್ಕೆ ಉಚಿತವಾಗಿ ಮೇವು ನೀಡುತ್ತಾರೆ.

Published on: Mar 04, 2024 08:09 AM