ಗದಗ: ಫೋಟೋ ಸ್ಟುಡಿಯೋದಲ್ಲೇ ನಡೆಯುತ್ತಿತ್ತು ನಕಲಿ ಸರ್ಟಿಫಿಕೇಟ್ ದಂಧೆ!

Edited By:

Updated on: Nov 24, 2025 | 10:09 AM

ಗದಗ ನಗರದ ಫೋಟೋ ಸ್ಟುಡಿಯೋವೊಂದರಲ್ಲಿ ಪ್ಯಾನ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ನಕಲಿ ದಾಖಲೆಗಳನ್ನು ತಯಾರಿಸುತ್ತಿದ್ದ ಜಾಲವನ್ನು ಬೆಟಗೇರಿ ಪೊಲೀಸರು ಭೇದಿಸಿದ್ದಾರೆ. ಆರೋಪಿ ರಾಘವೇಂದ್ರ ಕಬಾಡಿಯನ್ನು ಬಂಧಿಸಲಾಗಿದ್ದು, ಕಂಪ್ಯೂಟರ್, ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ನಕಲಿ ದಾಖಲೆ ಪಡೆದವರ ಪತ್ತೆಗೆ ತನಿಖೆ ಮುಂದುವರಿದಿದೆ.

ಗದಗ, ನವೆಂಬರ್ 24: ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ವ್ಯಾಪ್ತಿಯ ಹಾತಲಗೇರಿ ನಾಕಾ ಬಳಿಯ ಕಬಾಡಿ ಎಡಿಟಿಂಗ್ ಫೋಟೋ ಸ್ಟುಡಿಯೋದಲ್ಲಿ ಅಕ್ರಮವಾಗಿ ನಕಲಿ ದಾಖಲೆ ತಯಾರು ಮಾಡುವ ದಂಧೆ ನಿರಂತರವಾಗಿ ನಡೆಯಿತಿತ್ತು. ಆರೋಪಿ ರಾಘವೇಂದ್ರಸಾ ಕಬಾಡಿ ಎಂಬಾತ ನಕಲಿ ಡ್ರೈವಿಂಗ್ ಲೈಸೆನ್ಸ್, ಆಧಾರ ಕಾರ್ಡ್, ಸರ್ಕಾರಿ ಗುರುತಿ ಚೀಟಿ ತಯಾರಿಸಿ ಮಾರಾಟ ಮಾಡುತ್ತಿದ್ದ.  ಈ ಬಗ್ಗೆ ಮಾಹಿತಿ ಸಿಕ್ಕ ಬೆಟಗೇರಿ ಪೊಲೀಸರು ಗದಗ ಎಸ್ಪಿ ರೋಹನ್ ಜಗದೀಶ್ ಮಾರ್ಗದರ್ಶನದಲ್ಲಿ ಕಬಾಡಿ ಎಡಿಟಿಂಗ್ ಫೋಟೋ ಸ್ಟುಡಿಯೋ ಮೇಲೆ ದಾಳಿ ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ಬಳಸುತ್ತಿದ್ದ ಕಂಪ್ಯೂಟರ್, ಮಾನಿಟರ್, ಕ್ಯಾಮರಾ, ಪ್ರಿಂಟರ್ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಈ ಜಾಲದಲ್ಲಿ ಯಾರ್ಯಾರು ಇದ್ದಾರೆ, ಎಷ್ಟು ಜನ ಈಗಾಗಲೇ ನಕಲಿ ಸರ್ಟಿಫಿಕೆಟ್ ಪಡೆದಿದ್ದಾರೆ ಮತ್ತು ಯಾವ ಕೆಲಸಗಳಿಗೆ ಉಪಯೋಗ ಮಾಡಿದ್ದಾರೆ ಎನ್ನುವುದರ ಕುರಿತು ತನಿಖೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Nov 24, 2025 10:08 AM