Gadag News: ರಾಜ್ಯದಲ್ಲೇ ಮೊದಲ ವೀರ ಸಾವರ್ಕರ್ ಪುತ್ಥಳಿ ಅನಾವರಣ, ಇಲ್ಲಿದೆ ವಿಡಿಯೋ
ಶ್ರೀರಾಮಸೇನೆ ಗದಗ ಜಿಲ್ಲಾಧ್ಯಕ್ಷ ಮಹೇಶ್ ರೋಖಡೆ ಎಂಬುವವರು ಮನೆಯ ಎದುರು ಸಾವರ್ಕರ್ ಪುತ್ಥಳಿ ನಿರ್ಮಾಣ ಮಾಡಿದ್ದು, ಇಂದು(ಮೇ.28) ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ಶಿವಾನಂದ ಮಠದ ಸದಾಶಿವಾನಂದ ಭಾರತಿ ಶ್ರೀಗಳು ಪುತ್ಥಳಿ ಉದ್ಘಾಟನೆ ಮಾಡಿದರು.
ಗದಗ: ಮನೆಯ ಎದುರು ಸ್ವಾತಂತ್ರ ಹೋರಾಟಗಾರ ಸಾವರ್ಕರ್(Savarkar) ಪುತ್ಥಳಿ ನಿರ್ಮಾಣ ಮಾಡಿದ್ದ ಶ್ರೀರಾಮಸೇನೆ ಗದಗ ಜಿಲ್ಲಾಧ್ಯಕ್ಷ ಮಹೇಶ್ ರೋಖಡೆ ಎಂಬುವವರು, ಮನೆಗೂ ವೀರ್ ಸಾವರ್ಕರ್ ನಿಲಯ ಎಂದು ಹೆಸರು ಇಟ್ಟಿದ್ದಾರೆ. ಇಂದು(ಮೇ.28) ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Muthalik) ಹಾಗೂ ಶಿವಾನಂದ ಮಠದ ಸದಾಶಿವಾನಂದ ಭಾರತಿ ಶ್ರೀಗಳು ವೀರ್ ಸಾವರ್ಕರ್ ಪುತ್ಥಳಿ ಉದ್ಘಾಟನೆಯನ್ನ ನೇರವೇರಿಸಿದರು. ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಅನಾವರಣಗೊಂಡ ವೀರ ಸಾವರ್ಕರ್ ಪುತ್ಥಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ