ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಮುಸ್ಲಿಂ ಮೌಲ್ವಿಯ ಪ್ರಾರ್ಥನೆ ಆಲಿಸಿದ ನಮೋ

ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಮುಸ್ಲಿಂ ಮೌಲ್ವಿಯ ಪ್ರಾರ್ಥನೆ ಆಲಿಸಿದ ನಮೋ

ರಮೇಶ್ ಬಿ. ಜವಳಗೇರಾ
|

Updated on: May 28, 2023 | 10:30 AM

ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಮೌಲ್ವಿಯ ಪ್ರಾರ್ಥನೆ ಆಲಿಸಿದರು.

ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಗೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ನಂತರ ನಾಮಫಲಕವನ್ನು ಅನಾವರಣಗೊಳಿಸಿದರು. ಬಳಿಕ ನೂತನ ಸಂಸತ್ ಭವನದೊಳಗಿರುವ ಸ್ಪೀಕರ್ ಛೇಂಬರ್ ಮುಂಭಾಗ ರಾಜದಂಡವನ್ನು ಪ್ರತಿಷ್ಠಾಪಿಸಿದರು. ಇನ್ನು ಇದೇ ವೇಳೆ ಸರ್ವಧರ್ಮ ಪ್ರಾರ್ಥನೆ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿತ್ತು. ಎಲ್ಲಾ ಧರ್ಮದ ಪ್ರಾರ್ಧನೆಯನ್ನು ನಮೋ ಶ್ರದ್ಧೆಯಿಂದ ಆಲಿಸಿದರು.