ಸಿದ್ದರಾಮಯ್ಯಗೆ ಬೆಳ್ಳಿ ಕಡಗ ತೊಡಿಸಿ ಖುಷಿಪಟ್ಟ ಮಹಿಳಾಮಣಿಯರು

ಕುರುಬ ಸಂಘದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಗದಗ ತಾಲೂಕು ಕುರುಬರ ಸಂಘದಿಂದ ಕಂಬಳಿ ಹೊದಿಸಿ, ಬೆಳ್ಳಿ ಗದೆ ನೀಡಿ ಸನ್ಮಾನ ಮಾಡಲಾಯಿತು. ಜೊತೆಗೆ ಮಹಿಳಾ ಮಣಿಗಳು ಸಿಎಂ ಸಿದ್ದರಾಮಯ್ಯ ಕೈಗೆ ಬೆಳ್ಳಿ ಕಡಗ ತೊಡಿಸಿ ಖುಷಿಪಟ್ಟಿದ್ದಾರೆ.

ಗದಗ, ಸೆಪ್ಟೆಂಬರ್‌ 20: ಗದಗದಲ್ಲಿ ಇಂದು ಅದ್ಧೂರಿಯಾಗಿ ಕುರುಬರ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಹಲವು ಮುಖಂಡರು ಭಾಗಿಯಾಗಿದ್ದರು, ಜೊತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೂಡ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಗದಗ ತಾಲೂಕು ಕುರುಬರ ಸಂಘದಿಂದ ಸನ್ಮಾನ ಮಾಡಲಾಯಿತು. ಬೆಳ್ಳಿ ಗದೆ ನೀಡಿ ಹಾಗೂ ಕಂಬಳಿ ಹೊದಿಸಿ ಸಿದ್ದರಾಮಯ್ಯಗೆ ಸನ್ಮಾನ ಮಾಡಲಾಯಿತು. ಜೊತೆಗೆ ಮಹಿಳಾಮಣಿಗಳು ಸಿಎಂ ಕೈಗೆ ಬೆಳ್ಳಿ ಕಡಗ ತೊಡಿಸಿ ಗೌರವ ನೀಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ