ದರ್ಶನ್ ಪ್ರಕರಣದ ಬಗ್ಗೆ ನಟ ಝೈದ್ ಖಾನ್ ಮಾತು
Darshan Thoogudeepa: ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅವರ ಮೊದಲ ಸಿನಿಮಾಕ್ಕೆ ನಟ ದರ್ಶನ್ ಸಾಥ್ ಕೊಟ್ಟಿದ್ದರು. ಇದೀಗ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಚಿತ್ರೀಕರಣ ಮುಗಿದಿದ್ದು ಬಿಡುಗಡೆ ಹಂತಕ್ಕೆ ಬಂದಿದೆ. ಟಿವಿ9 ಜೊತೆಗೆ ಮಾತನಾಡಿರುವ ಝೈದ್ ಖಾನ್, ನಟ ದರ್ಶನ್ ಅವರ ಪ್ರಸ್ತತ ಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. ಅವರು ಹೇಳಿದ್ದೇನು? ವಿಡಿಯೋ ನೋಡಿ...
ಸಚಿವ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ ಅವರ ಮೊದಲ ಸಿನಿಮಾಕ್ಕೆ ನಟ ದರ್ಶನ್ ಸಾಥ್ ಕೊಟ್ಟಿದ್ದರು. ಇದೀಗ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಚಿತ್ರೀಕರಣ ಮುಗಿದಿದ್ದು ಬಿಡುಗಡೆ ಹಂತಕ್ಕೆ ಬಂದಿದೆ. ಸಿನಿಮಾದ ಪ್ರಚಾರದಲ್ಲಿ ಝೈದ್ ಖಾನ್ ಮತ್ತು ನಾಯಕಿ ಮಲೈಕಾ ವಸುಪಾಲ್ ತೊಡಗಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಝೈದ್ ಖಾನ್, ನಟ ದರ್ಶನ್ ಅವರ ಪ್ರಸ್ತತ ಸ್ಥಿತಿಯ ಬಗ್ಗೆಯೂ ಮಾತನಾಡಿದ್ದಾರೆ. ದರ್ಶನ್ ಅವರ ಬಗ್ಗೆ ಪ್ರಾರ್ಥನೆ ಮಾಡಬಹುದು ಅಷ್ಟೆ, ಆದಷ್ಟು ಶೀಘ್ರ ಅವರು ಹೊರಗೆ ಬರಲಿ, ಅವರು ಜೈಲಿಂದ ಹೊರಬಂದಾಗ ಅವರನ್ನು ಭೇಟಿ ಆಗಲಿಲ್ಲ, ಆಗ ಅವರು ಬೇರೆಯದ್ದೇ ಮನಸ್ಥಿತಿಯಲ್ಲಿದ್ದರು ಹಾಗಾಗಿ ಭೇಟಿ ಮಾಡಲಿಲ್ಲ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

