AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಡ್ ಶೋ ವೇಳೆ ಪುಟ್ಟ ಬಾಲಕನಿಗೆ ಸೆಲ್ಯೂಟ್ ಹೊಡೆದ ಪ್ರಧಾನಿ ಮೋದಿ

ರೋಡ್ ಶೋ ವೇಳೆ ಪುಟ್ಟ ಬಾಲಕನಿಗೆ ಸೆಲ್ಯೂಟ್ ಹೊಡೆದ ಪ್ರಧಾನಿ ಮೋದಿ

ಅಕ್ಷಯ್​ ಪಲ್ಲಮಜಲು​​
|

Updated on: Sep 20, 2025 | 5:01 PM

Share

ಪ್ರಧಾನಿ ಮೋದಿ ಅವರು ಇಂದು ಗುಜರಾತ್​​​ಗೆ ಭೇಟಿ ನೀಡಿದ್ದು, ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಇದಕ್ಕೂ ಮುನ್ನ ಅವರು ಭಾವನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ಮೋದಿ ಅವರನ್ನು ನೋಡಲು ರಸ್ತೆಗಳಲ್ಲಿ ಸಾವಿರಾರೂ ಕಾರ್ಯಕರ್ತರು, ಜನರು ಜಮಾಯಿಸಿದರು. ಈ ವೇಳೆ ಒಂದು ವಿಶೇಷ ಘಟನೆ ನಡೆದಿದೆ. ಅದೇನು ಎಂಬುದು ಇಲ್ಲಿದೆ ನೋಡಿ.

ಗುಜರಾತ್, ಸೆ.20: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಗುಜರಾತ್​​​​ನಲ್ಲಿ 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇದಕ್ಕೂ ಮುನ್ನ ಅವರು ಗುಜರಾತ್​​​ನ ಭಾವನಗರದಲ್ಲಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಪ್ರಧಾನಿ ರಸ್ತೆ ಬದಿಯಲ್ಲಿ ನಿಂತಿದ್ದ ಸಾವಿರಾರೂ ಜನರತ್ತ ಕೈಬಿಸಿದ್ದಾರೆ. ಈ ಸಂದರ್ಭದಲ್ಲಿ ಪುಟ್ಟ ಬಾಲಕನೊಬ್ಬ ಮೋದಿ ಅವರನ್ನು ನೋಡಿ ಸೆಲ್ಯೂಟ್ ಮಾಡಿದ್ದಾನೆ. ಇದಕ್ಕೆ ಪ್ರಧಾನಿ ಮೋದಿ ಅವರು ಕೂಡ ಪ್ರತಿಕ್ರಿಯಿಸಿ, ಆ ಹುಡುಗನಿಗೆ ಸೆಲ್ಯೂಟ್ ಹೊಡೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಪ್ರಧಾನಿ ಮೋದಿ ಸೆಲ್ಯೂಟ್ ಮಾಡಿರುವ ಬಗ್ಗೆ ಅಲ್ಲೇ ಪಕ್ಕದಲ್ಲಿ ನಿಂತಿದ್ದ ತನ್ನ ತಾಯಿ ಬಳಿ ಹೇಳಿ ಖುಷಿಪಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಪ್ರಧಾನಿ ನನಗೆ ಸೆಲ್ಯೂಟ್ ಹೊಡೆದರು ಎಂಬ ಖುಷಿಯಲ್ಲಿ ಹುಡುಗ ಕುಣಿದಾಡಿದ್ದಾನೆ. ಇನ್ನು ಪ್ರಧಾನಿ ಮೋದಿ ಅವರು ಅಷ್ಟೊಂದು ಜನರ ಮಧ್ಯೆ ಆ ಬಾಲಕನತ್ತ ಗಮನ ನೀಡಿರುವುದು ವಿಶೇಷವಾಗಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ