ರಾಮ ಭಂಟ ಗಾಳಿ ಆಂಜನೇಯನಿಗೆ ಜಾತ್ರೆಯ ಸಂಭ್ರಮ; ಎಲ್ಲೆಲ್ಲೂ ಭಕ್ತಸಾಗರ
ಬ್ಯಾಟರಾಯನಪುರದಲ್ಲಿ ನೆಲಸಿರೋ ಗಾಳಿ ಆಂಜನೇಯನಿಗೆ ಪ್ರತೀ ವರ್ಷ ರಾಮನವಮಿ ಬಳಿಕ ರಥೋತ್ಸವ ನಡೆಯುತ್ತೆ. ಅದ್ರಂತೆ ಮಾರ್ಚ್ 31ರಂದು ಅದ್ಧೂರಿಯಾಗಿ 137 ನೇ ಬ್ರಹ್ಮ ರಥೋತ್ಸವ ನಡೆಯಿತ್ತು.
ಬ್ಯಾಟರಾಯನಪುರದಲ್ಲಿ ನೆಲಸಿರೋ ಗಾಳಿ ಆಂಜನೇಯನಿಗೆ ಪ್ರತೀ ವರ್ಷ ರಾಮನವಮಿ ಬಳಿಕ ರಥೋತ್ಸವ ನಡೆಯುತ್ತೆ. ಅದ್ರಂತೆ ಮಾರ್ಚ್ 31ರಂದು ಅದ್ಧೂರಿಯಾಗಿ 137 ನೇ ಬ್ರಹ್ಮ ರಥೋತ್ಸವ ನಡೆಯಿತ್ತು. ಆಂಜನೇಯ ದೇವಸ್ಥಾನ ದಿಂದ ಶುರುವಾದ ಬ್ರಹ್ಮ ರಥೋತ್ಸವ, BHEL ತನಕ ಸಾಗಿತ್ತು. ಈ ವಿಶೇಷ ಸಂದರ್ಭಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ರು. ಸ್ವಾಮಿಯ ತೇರು ನೋಡಿ ಕಣ್ತುಂಬಿಕೊಂಡ್ರು .
ಮಧ್ಯಾಹ್ನ ಶುರುವಾದ ರಥೋತ್ಸವ ಜಾತ್ರೆ ಮರುದಿನ ಬೆಳಗ್ಗೆ ತನಕ ನಡೆಯಿತು. ಅಕ್ಕಪಕ್ಕದ ಏರಿಯಾಗಳಿಂದ ಇಲ್ಲಿ ಸುಮಾರು 15 ಕ್ಕೂ ಹೆಚ್ಚು ದೇವರ ಪಲ್ಲಕಿಗಳು ಬಂದಿದ್ದವು. ಜಾತ್ರೆ ಉತ್ಸವದ ಉದ್ದಕ್ಕೂ ಯುವಕರ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಸೇರಿದಂತೆ ರಾತ್ರಿ ಪೂರ್ತಿಯಾಗಿ ಕಾರ್ಯಕ್ರಮ ನಡೆದು ದಶಮಿ ಆಗಿರೋದ್ರಿಂದ ವೇಣುಗೋಪಾಲ ಸ್ವಾಮಿಗೂ ರಥೋತ್ಸವ ನಡೆಯಿತು. ಇನ್ನು ಜಾತ್ರೆ ಕಾರಣದಿಂದಾಗಿ ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ಕಾರಣಕ್ಕಾಗಿಯೇ ಸಿಟಿಯಿಂದ ಮೈಸೂರು ಕಡೆ ಹೋಗುವವರಿಗೆ ಸಂಚಾರ ನಿರ್ಬಂಧ ಹೇರಲಾಗಿತ್ತು.
Published on: Apr 01, 2023 01:52 PM