Ganesh Chaturthi 2022: ನರಾಚಿ ಸೆಟ್​ನಲ್ಲಿ ‘ಕೆಜಿಎಫ್​’ ಸ್ಟೈಲ್​ ಗಣಪ; ದರ್ಶನಕ್ಕೆ ಮುಗಿಬಿದ್ದ ಭಕ್ತರ ದಂಡು

| Updated By: ಮದನ್​ ಕುಮಾರ್​

Updated on: Sep 01, 2022 | 9:03 AM

KGF Ganapa: ‘ಕೆಜಿಎಫ್​ ಗಣಪ’ನ ದರ್ಶನಕ್ಕೆ ಜನರು ಮುಗಿಬಿದ್ದಿದ್ದಾರೆ. ಗಣಿ ಪ್ರದೇಶ, ವೀರಗಲ್ಲು, ನರಾಚಿಯ ಹೆಬ್ಬಾಗಿಲು, ಸುರಂಗ ಮುಂತಾದವು ಈ ಸೆಟ್​ನಲ್ಲಿ ಗಮನ ಸೆಳೆಯುತ್ತಿವೆ.

ಕನ್ನಡದ ‘ಕೆಜಿಎಫ್’ ಸಿನಿಮಾವನ್ನು ನೋಡಿ ಎಲ್ಲ ಭಾಷೆಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇಂದಿಗೂ ಕೂಡ ಆ ಸಿನಿಮಾದ ಕ್ರೇಜ್​ ಕಡಿಮೆ ಆಗಿಲ್ಲ. ತಮಿಳುನಾಡಿನ ಕೃಷ್ಣಗಿರಿ (Krishnagiri) ಜಿಲ್ಲೆಯ ಡೆಂಕಣಿಕೊಟ್ಟ ಊರಿನಲ್ಲಿ ಅದ್ದೂರಿಯಾಗಿ ಗಣೇಶೋತ್ಸವ (Ganesh Chaturthi 2022) ಆಚರಿಸಲಾಗಿದೆ. ಅಚ್ಚರಿ ಎಂದರೆ, ‘ಕೆಜಿಎಫ್​ 2’ (KGF: Chapter 2) ಸಿನಿಮಾದ ನರಾಚಿ ರೀತಿಯಲ್ಲಿ ಸೆಟ್​ ಹಾಕಿ, ಅದರಲ್ಲಿ ಗಣೇಶನನ್ನು ಕೂರಿಸಿ ಸಂಭ್ರಮಿಸಲಾಗಿದೆ. ಅಂದಾಜು 20 ಲಕ್ಷ ರೂಪಾಯಿ ಕರ್ಚು ಮಾಡಿ ಈ ಸೆಟ್​ ಹಾಕಿಸಲಾಗಿದೆ. ‘ಕೆಜಿಎಫ್​ ಗಣಪ’ನನ್ನು ನೋಡಲು ಸುತ್ತಮುತ್ತಲಿನ ಊರಿನ ಜನರು ಮುಗಿಬಿದ್ದಿದ್ದಾರೆ. ಗಣಿ ಪ್ರದೇಶ, ವೀರಗಲ್ಲು, ನರಾಚಿಯ ಹೆಬ್ಬಾಗಿಲು, ಸುರಂಗ ಮುಂತಾದವು ಈ ಸೆಟ್​ನಲ್ಲಿ ಗಮನ ಸೆಳೆಯುತ್ತಿವೆ. ಎಲ್ಲವನ್ನೂ ಕಣ್ತುಂಬಿಕೊಂಡು ಜನರು ಖುಷಿಪಟ್ಟಿದ್ದಾರೆ.

 

Published on: Sep 01, 2022 09:03 AM