ಬಾದಾಮಿ ಗುಂಪು ಘರ್ಷಣೆ ಪ್ರಕರಣ: ನಂಗೆ ಚಾಕು ಹಾಕಿದ ಆ ವ್ಯಕ್ತಿ, ಆತನ ತಾಯಿ ಅರೆಸ್ಟ್ ಆಗಿಲ್ಲ; ಗಾಯಾಳು ಅರುಣ ಹೇಳಿಕೆ
ಸಿದ್ದರಾಮಯ್ಯ ಅವರು ನನ್ನನ್ನು ನೋಡಲು ಬರುವುದು ಬೇಡ ಅಂದಿಲ್ಲ, ನನಗೆ ಚಾಕು ಇರಿದ 30 ಜನರನ್ನು ಬಂಧಿಸಿ, ಐವರು ಪೊಲೀಸರನ್ನು ಅಮಾನತು ಮಾಡಿಸಿ ನಂತರ ನೋಡಲು ಬನ್ನಿ ಎಂದು ಹೇಳಿದ್ದೇನೆ ಎಂದು ಬಾದಾಮಿ ಗುಂಪು ಘರ್ಷಣೆಯಲ್ಲಿ ಗಾಯಗೊಂಡ ಅರುಣ ಕಟ್ಟಿಮನಿ ಹೇಳಿದ್ದಾರೆ.
ಬಾಗಲಕೋಟೆ: ಬಾದಾಮಿ ತಾಲೂಕಿನ ಕೆರೂರಿನಲ್ಲಿ ನಡೆದ ಗುಂಪು ಘರ್ಷಣೆ ಪ್ರಕರಣ ಸಂಬಂಧ ಗಾಯಾಳು ಅರುಣ ಕಟ್ಟಿಮನಿ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ನನ್ನನ್ನು ನೋಡಲು ಬರುವುದು ಬೇಡ ಅಂದಿಲ್ಲ. ನಿಮ್ಮನ್ನು ಭೇಟಿಯಾಗಲು ಬರ್ತಿದ್ದಾರೆ ಎಂದು ಸಿಪಿಐ ಹೇಳಿದರು. ನನ್ನ ಮೇಲೆ ಹಲ್ಲೆ ಮಾಡಿದ 30 ಜನರನ್ನು ಮೊದಲು ಬಂಧಿಸಿ. ಐವರು ಪೊಲೀಸರ ಕೈವಾಡವಿದೆ ಅವರನ್ನು ಸಸ್ಪೆಂಡ್ ಮಾಡಿಸಿ. ಚಾಕುವಿನಿಂದ ಇರಿದಿದ್ದ ಯಾಸೀನ್ನ ತಾಯಿ ಬಂಧನವಾಗಿಲ್ಲ. ಎಲ್ಲಿ ತಪ್ಪು ನಡೆದಿದೆ ಎಂದು ಪರಿಶೀಲಿಸಿ ನಂತರ ನೋಡಲು ಬನ್ನಿ ಅಂತ ಹೇಳಿದ್ದೇನೆ. ಗೋಪಾಲ ಮೇಲೆ ಹಲ್ಲೆಮಾಡಿದ ಐವರ ವಿರುದ್ಧ ಕ್ರಮ ಜರುಗಿಸಿಲ್ಲ. ಯಾವುದೇ ಪಕ್ಷದವರು ಈ ರೀತಿ ಹೇಳು ಎಂದು ಹೇಳಿಲ್ಲ, ನಾನಾಗಿಯೇ ಬರಬೇಡಿ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.
Published on: Jul 15, 2022 06:55 PM