ಕಸದ ಲಾರಿಗೆ ಇಬ್ಬರು ಬಲಿ: ನ್ಯಾಯ ಸಿಗದಿದ್ದರೆ ನಾನೇ ಲಾರಿ ಚಾಲಕನ ಹತ್ಯೆ ಮಾಡುವೆ, ಮೃತನ ತಂದೆ ಆಕ್ರೋಶ
ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಾವನ್ನಪ್ಪಿದ್ದಾರೆ. ಇದೀಗ ಮನೆಯವರು ಬಿಬಿಎಂಪಿ ಹಾಗೂ ಚಾಲಕನ ವಿರೋಧ ಆಕ್ರೊಶ ವ್ಯಕ್ತಪಡಿಸಿದ್ದಾರೆ. ನನ್ನ ಮಗನಿಗೆ ನ್ಯಾಯ ಸಿಗಬೇಕು. ಒಂದು ವೇಳೆ ನಮಗೆ ನ್ಯಾಯ ಸಿಗದಿದ್ದರೆ ನಾನೇ ಲಾರಿ ಚಾಲಕನ ಹತ್ಯೆ ಮಾಡುವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಲ್ಲಿದೆ ವಿಡಿಯೋ
ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಾವನ್ನಪ್ಪಿದ್ದು. ಇದೀಗ ಮನೆಯವರು ಬಿಬಿಎಂಪಿ ಹಾಗೂ ಚಾಲಕನ ವಿರೋಧ ಆಕ್ರೊಶ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿ ಕಸದ ಲಾರಿ ಹರಿದು ಬೈಕ್ನಲ್ಲಿದ್ದ ಇಬ್ಬರು ಸಾವುನ್ನಪ್ಪಿದ್ದಾರೆ. ಬೈಕ್ನಲ್ಲಿದ್ದ ಯುವಕ ಪ್ರಶಾಂತ್, ಯುವತಿ ಶಿಲ್ಪಾ(27) ಮೃತರಾಗಿದ್ದಾರೆ. ಐಟಿಪಿಎಲ್ನ TCSನಲ್ಲಿ ಕೆಲಸ ಮಾಡ್ತಿದ್ದ ಪ್ರಶಾಂತ್, ಶಿಲ್ಪಾ. ನಿನ್ನೆ ಇಬ್ಬರು ಕೆ.ಆರ್.ಸರ್ಕಲ್ ಬಳಿ ಊಟಕ್ಕೆಂದು ಹೊರಗೆ ಬಂದಿದ್ದಾಗ ಈ ಅಪಘಾತ ನಡೆದಿದೆ. ಈ ಬಗ್ಗೆ ಮಾಧ್ಯಮದ ಮುಂದೆ ಪ್ರಶಾಂತ್ ಅವರ ತಂದೆ ಕಣ್ಣೀರು ಹಾಕಿದ್ದಾರೆ. ನನಗೆ ನ್ಯಾಯಬೇಕು, ನ್ಯಾಯ ಸಿಗದಿದ್ದರೆ ಇಲ್ಲಿಯೇ ಕತ್ತು ಕೊಯ್ದುಕೊಂಡು ಸಾಯುತ್ತೇವೆ ಎಂದು ಹೇಳಿದ್ದಾರೆ. ನನ್ನ ಮಗ ಹುಟ್ಟಿದ್ದು ಈ ಆಸ್ಪತ್ರೆಯಲ್ಲೇ ಈಗ ಸತ್ತಿದ್ದು ಕೂಡ ಈ ಆಸ್ಪತ್ರೆಯಲ್ಲೇ, ಒಂದು ವೇಳೆ ಆ ಲಾರಿ ಚಾಲಕನ್ನು ಬಂಧಿಸದ್ದಿದರೆ ನಾನೇ ಕೊಲೆ ಮಾಡುವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ