ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ: ಬಂಧನಕ್ಕೂ ಮುನ್ನವೇ ಆರೋಪಿಗೆ ಹುಚ್ಚಿ ಪಟ್ಟ ಕಟ್ಟಿದ ಪೊಲೀಸ್ರು
ಬೇಲೂರಿನ ಪುರಸಭೆ ಆವರಣದಲ್ಲಿರುವ ಐತಿಹಾಸಿಕ ಶ್ರೀ ವರಸಿದ್ದಿ ವಿನಾಯಕ ಮೂರ್ತಿ ಚಪ್ಪಲಿ ಹಾರ ಹಾಕಿ ವಿಕೃತ ಕುಕೃತ್ಯವೊಂದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ನೀಚತನ ಮೆರೆದಿದ್ದು, ಸಿಸಿಟಿವಿ ಪರಿಶೀಲನೆ ವೇಳೆ ಈ ಕೃತ್ಯ ಎಸಗಿರುವುದು ಮಹಿಳೆ ಎನ್ನುವುವುದ ಮೇಲ್ನೋಟಕ್ಕೆ ಕಂಡುಬಂದಿದೆ.
ಹಾಸನ, (ಸೆಪ್ಟೆಂಬರ್ 21): ಬೇಲೂರಿನ ಪುರಸಭೆ ಆವರಣದಲ್ಲಿರುವ ಐತಿಹಾಸಿಕ ಶ್ರೀ ವರಸಿದ್ದಿ ವಿನಾಯಕ ಮೂರ್ತಿ ಚಪ್ಪಲಿ ಹಾರ ಹಾಕಿ ವಿಕೃತ ಕುಕೃತ್ಯವೊಂದು ಬೆಳಕಿಗೆ ಬಂದಿದೆ. ಕಿಡಿಗೇಡಿಗಳು ಗಣೇಶನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿ ನೀಚತನ ಮೆರೆದಿದ್ದು, ಸಿಸಿಟಿವಿ ಪರಿಶೀಲನೆ ವೇಳೆ ಈ ಕೃತ್ಯ ಎಸಗಿರುವುದು ಮಹಿಳೆ ಎನ್ನುವುವುದ ಮೇಲ್ನೋಟಕ್ಕೆ ಕಂಡುಬಂದಿದೆ. ಮಹಿಳೆ ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿ ಹಾಕಿಕೊಂಡು ಹೋಗಿದ್ದು, ಅಲ್ಲಿಂದ ವಾಪಸ್ ಆಗುವ ವೇಳೆ ಆಕೆಯ ಕಾಲಲ್ಲಿ ಚಪ್ಪಲಿ ಇಲ್ಲ. ಹೀಗಾಗಿ ಈ ಕೃತ್ಯವನ್ನು ಆಕೆಯೇ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಮಹಿಳೆಯನ್ನು ಬಂಧಿಸಲು 8 ತಂಗಳನ್ನು ರಚಿಸಿದ್ದಾರೆ. ಆದ್ರೆ, ದುರ್ವೈವ ಅಂದ್ರೆ ಆರೋಪಿ ಬಂಧನಕ್ಕೂ ಮುನ್ನವೇ ಆಕೆಗೆ ಪೊಲೀಸ್ರು ಹಚ್ಚಿ ಎನ್ನುವ ಪಟ್ಟ ಕಟ್ಟಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ನೋಡಿದ್ರೆ ಆಕೆ ಮಾನಸಿಕ ಅಸ್ವಸ್ಥೆ ಎನ್ನುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಬಿಜೆಪಿ ಎಂಎಲ್ ಸಿ ಸಿಟಿ ರವಿ ಅವರು ಎಸ್ಪಿಗೆ ತರಾಟೆಗೆ ತೆದುಕೊಂಡಿದ್ದಾರೆ.
